ಪಾಟ್ನಾ: ಮಹಿಳೆಯೊಬ್ಬಳು ತನ್ನ ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು ನದಿಗೆ ಎಸೆದು ತನ್ನ ಪ್ರೇಮಿಯೊಂದಿಗೆ ಪರಾರಿಯಾದ ಘಟನೆ ಬಿಹಾರದಲ್ಲಿ ನಡೆದಿದೆ.
ಇಲ್ಲಿನ ಬೆಗುಸಾರೈ ಜಿಲ್ಲೆಯ ಚಾಂದ್‍ಪುರದಲ್ಲಿ ಮಂಗಳವಾರದಂದು ಈ ಘಟನೆ ನಡೆದಿದೆ. 30 ವರ್ಷದ ಮಹಿಳೆ ತನ್ನ 2 ಹಾಗೂ 4 ವರ್ಷದ ಇಬ್ಬರು ಹೆಣ್ಣು ಮಕ್ಕಳನ್ನ ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿ ತವರು ಮನೆಯಿಂದ ಬಂದಿದ್ದಳು. ಆದ್ರೆ ಬೂದಿ ಗಂಡಕ್ ನದಿಯ ಬಳಿ ಬಂದು ಮಕ್ಕಳನ್ನು ನದಿಗೆ ಎಸೆದಿದ್ದು, ನಂತರ ಪ್ರೇಮಿಯೊಂದಿಗೆ ಬೈಕ್‍ನಲ್ಲಿ ಹೋಗಿದ್ದಾಳೆ.
ಮಕ್ಕಳು ಸೇಫ್: ಸ್ಥಳದಲ್ಲಿದ್ದ ಮೀನುಗಾರರು ಮಕ್ಕಳು ನೀರಿನಲ್ಲಿ ಒದ್ದಾಡುತ್ತಿರುವುದನ್ನು ನೋಡಿ ತಕ್ಷಣ ದೋಣಿಯಲ್ಲಿ ಬಂದು ಪುಟ್ಟ ಹೆಣ್ಣುಮಕ್ಕಳನ್ನ ರಕ್ಷಿಸಿದ್ದಾರೆ. ನಂತರ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆಣ್ಣು ಮಕ್ಕಳ ಅಜ್ಜ ಮನೋಜ್ ಶರ್ಮಾ ಮಹಿಳೆಯ ವಿರುದ್ಧ ಕೊಲೆ ಯತ್ನದ ದೂರು ದಾಖಲಿಸಿದ್ದಾರೆ.
The post ಮಕ್ಕಳನ್ನ ನೀರಿಗೆ ಎಸೆದು ಪ್ರೇಮಿಯೊಂದಿಗೆ ಬೈಕ್‍ನಲ್ಲಿ ಪರಾರಿಯಾದ್ಲು appeared first on Kannada Public tv.