ನವದೆಹಲಿ: ಪ್ರತಿಷ್ಠಿತ ಪದ್ಮ ಪ್ರಶಸ್ತಿಗೆ ಇನ್ನು ಮುಂದೆ ಸಾರ್ವಜನಿಕರೇ ನಾಮ ನಿರ್ದೇಶನ ಮಾಡಬಹುದು. ಪ್ರಶಸ್ತಿ ಆಯ್ಕೆಯಲ್ಲಿ ಯಾವುದೇ ಲಾಬಿ ಹಾಗೂ ಭ್ರಷ್ಟಾಚಾರ ನಡೆಯದಂತೆ ಕೇಂದ್ರ ಸರ್ಕಾರ ಜನರಿಗೆ ಆಭ್ಯರ್ಥಿಗಳನ್ನು ಆಯ್ಕೆ ಮಾಡುವ ಅವಕಾಶ ನೀಡಿದೆ.
ಆನ್‍ಲೈನ್ ಮೂಲಕ ಅಭ್ಯರ್ಥಿಗಳ ನಾಮ ನಿರ್ದೇಶನ ಮಾಡಬಹುದು. ನಾಮನಿರ್ದೆಶನ ಮಾಡುವವರು ಆನ್‍ಲೈನ್‍ನಲ್ಲಿ ತಮ್ಮ ಆಧಾರ್ ಕಾರ್ಡ್ ವಿವರ ನೀಡುವುದು ಕಡ್ಡಾಯ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಪ್ರಶಸ್ತಿಗೆ ನಾಮನಿರ್ದೆಶನ ಮಾಡುವ ಆಯ್ಕೆಯನ್ನು ಜನರ ಮುಂದಿಡಲಾಗಿದೆ.
ಈಗಾಗಲೇ ಪೋರ್ಟಲ್ ಆರಂಭಗೊಂಡಿದ್ದು, 1700 ಮಂದಿಯ ಹೆಸರನ್ನು ಜನರು ಪದ್ಮ ಪ್ರಶಸ್ತಿಗೆ ಶಿಫಾರಸು ಮಾಡಿದ್ದಾರೆ. ಈ ಪೋರ್ಟಲ್‍ನಲ್ಲಿ ಹೇಗೆ ಜನರು ವ್ಯಕ್ತಿಗಳನ್ನು ಶಿಫಾರಸು ಮಾಡಬಹುದು ಎನ್ನುವುದನ್ನು ವಿವರಿಸಲಾಗಿದೆ. ನಾಮ ನಿರ್ದೇಶನಕ್ಕೆ ಸೆ.15 ಕೊನೆಯ ದಿನಾಂಕ.
ಪದ್ಮ ಪ್ರಶಸ್ತಿಗೆ ಶಿಫಾರಸು ಮಾಡಲು ಈ ವೆಬ್‍ಸೈಟ್‍ಗೆ ಭೇಟಿ ನೀಡಿ: www.padmaawards.gov.in
The post ದೇಶದಲ್ಲೇ ಮೊದಲು; ಪದ್ಮ ಪ್ರಶಸ್ತಿಗೆ ಜನರೇ ಶಿಫಾರಸು ಮಾಡಬಹುದು! appeared first on Kannada Public tv.