ಬೆಂಗಳೂರು: ಈ ಫೋಟೋ ಅನ್ನು ಪಬ್ಲಿಕ್ ಟಿವಿ ಕ್ರಿಯೇಟ್ ಮಾಡಿರುವುದಲ್ಲ, ಮಾಡಿಸಿರುವುದೂ ಅಲ್ಲ. ಕೊಪ್ಪಳದಲ್ಲಿ ಕರ್ನಾಟಕ ಬಂದ್ ವೇಳೆ ಇಂದು ನಡೆದ ಪ್ರತಿಭಟನೆಯಲ್ಲಿ ಪ್ರದರ್ಶಿಸಿದ ಫ್ಲೆಕ್ಸ್ ಇದು. ಇದರ ವರದಿಯನ್ನು ಪಬ್ಲಿಕ್ ಟಿವಿ ಸೇರಿದಂತೆ ಅನೇಕ ಮಾಧ್ಯಮಗಳು ಬಿತ್ತರಿಸಿವೆ.
ಆದರೆ, ಕೆಲವರು ಇದನ್ನು ಪಬ್ಲಿಕ್ ಟಿವಿಯೇ ಕ್ರಿಯೇಟ್ ಮಾಡಿರುವಂತೆ ಗ್ರಾಫಿಕ್ಸ್ ಮಾಡಿ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹಂಚುತ್ತಿದ್ದಾರೆ. ಜನರ ಆಕ್ರೋಶಕ್ಕೆ ಬಂದ ನಾನಾ ರೂಪಗಳನ್ನು ಬಿಂಬಿಸಲಾಗಿದೆ.
ಎಲ್ಲ ಪ್ರತಿಭಟನೆಗಳನ್ನು ಬಿತ್ತರಿಸಿದಂತೆಯೇ ಕೊಪ್ಪಳದ ಪ್ರತಿಭಟನೆಯನ್ನೂ ಪಬ್ಲಿಕ್ ಟಿವಿ ವರದಿ ಮಾಡಿದೆ ಎಂದು ಎಲ್ಲರ ಗಮನಕ್ಕೆ ತರುತ್ತಿದ್ದೇವೆ.
The post ಗಮನಿಸಿ, ಈ ಫೋಟೋವನ್ನು ಪಬ್ಲಿಕ್ ಟಿವಿ ಸೃಷ್ಟಿ ಮಾಡಿಲ್ಲ appeared first on Kannada Public tv.