ಗಣೇಶ ಚೌತಿ ಬಂತೆಂದರೆ ಗಣೇಶ ಬಂದ… ಕಾಯಿ ಕಡುಬು ತಂದ… ಅಂತ ಹುಡುಗರು, ಮಕ್ಕಳು ಸಂಭ್ರಮದಿಂದ ಹೇಳ್ತಾರೆ. ಗಣಪತಿಗೆ ಮೋದಕ ಹಾಗೂ ಕಡುಬು ತುಂಬಾ ಇಷ್ಟವಾದ ತಿನಿಸು. ಸಿಹಿ ಕಡುಬು ಮಾಡೋ ವಿಧಾನ ಇಲ್ಲಿದೆ ನೋಡಿ
ಬೇಕಾಗುವ ಸಾಮಗ್ರಿಗಳು:
1. ಅಕ್ಕಿ ಹಿಟ್ಟು – 1 ಕಪ್
2. ಮೈದಾಹಿಟ್ಟು – 1 ಚಮಚ
3. ಉಪ್ಪು – 1 ಚಿಟಿಕೆ
4. ತೆಂಗಿನಕಾಯಿ ತುರಿ – 1 ಕಪ್
5. ಬೆಲ್ಲ – 1/2 ಕಪ್
6. ಏಲಕ್ಕಿ – ಸ್ವಲ್ಪ
7. ತುಪ್ಪ – ಸ್ವಲ್ಪ
ಮಾಡುವ ವಿಧಾನ:
* ಒಂದು ಪಾತ್ರೆಯಲ್ಲಿ ನೀರು ಕುದಿಯಲು ಇಟ್ಟು ಅದಕ್ಕೆ ಒಂದು ಚಿಟಿಕೆ ಉಪ್ಪು ಹಾಕಿ.
* ನೀರು ಕುದಿಯಲು ಆರಂಭಿಸಿದಾಗ ಅಕ್ಕಿ ಹಿಟ್ಟು ಹಾಗೂ ಮೈದಾಹಿಟ್ಟು ಹಾಕಿ 2-3 ನಿಮಿಷ ಬೇಯಲು ಬಿಡಿ.
* ಪಾತ್ರೆಯನ್ನ ಒಲೆಯಿಂದ ಕೆಳಗಿಳಿಸಿ, ಒಂದು ಚಮಚ ತುಪ್ಪ ಹಾಕಿ ಹಿಟ್ಟನ್ನು ಗಂಟಿಲ್ಲದಂತೆ ಚೆನ್ನಾಗಿ ನಾದಿಕೊಳ್ಳಿ.
* ನಂತರ ಹಿಟ್ಟನ್ನ ನಿಂಬೆಹಣ್ಣಿನ ಗಾತ್ರಕ್ಕೆ ಉಂಡೆ ಮಾಡಿಕೊಂಡು ಬದಿಗಿಡಿ.
* ಒಂದು ಪಾತ್ರೆಯನ್ನ ಸ್ಟವ್ ಮೇಲೆ ಇಟ್ಟು ಪುಡಿ ಮಾಡಿದ ಬೆಲ್ಲ ಹಾಕಿ ಕರಗಿಸಿ.
* ಬೆಲ್ಲದಲ್ಲಿ ಕಸ ಇದ್ದರೆ ಸೋಸಿಕೊಳ್ಳಿ.
* ನಂತರ ಇದಕ್ಕೆ ತೆಂಗಿನಕಾಯಿ ತುರಿಯನ್ನು ಹಾಕಿ ನೀರಿನ ಅಂಶ ಹೋಗುವವರೆಗೆ ಚೆನ್ನಾಗಿ ಫ್ರೈ ಮಾಡಿ.
* ಕೊನೆಯಲ್ಲಿ ಏಲಕ್ಕಿ ಪುಡಿ ಬೆರೆಸಿ ಒಲೆಯಿಂದ ಕೆಳಗಿಳಿಸಿ.
* ಅಕ್ಕಿಹಿಟ್ಟಿನ ಉಂಡೆಯನ್ನು ಪೂರಿಯಂತೆ ತಟ್ಟಿಕೊಂಡು ಅದರ ಮಧ್ಯಭಾಗಕ್ಕೆ ಸ್ವಲ್ಪ ಹೂರಣ ಇಟ್ಟು ಹಿಟ್ಟಿನ ಅಂಚನ್ನು ಪ್ರೆಸ್ ಮಾಡಿ ಮಡಚಿಕೊಳ್ಳಿ.
* ನಂತರ ಇದನ್ನ ಇಡ್ಲಿ ಕುಕ್ಕರ್‍ನಲ್ಲಿ ಇಟ್ಟು 5-6 ನಿಮಿಷ ಬೇಯಿಸಿ.
* ತುಪ್ಪದ ಜೊತೆ ಸವಿಯಲು ಕೊಡಿ.
The post ಗಣಪನಿಗೆ ಪ್ರಿಯವಾದ ಸಿಹಿ ಕಡುಬು ಮಾಡೋ ವಿಧಾನ appeared first on Kannada Public tv.