ವಾಷಿಂಗ್ಟನ್: ಅತೀ ವೇಗವಾಗಿ ಕಾರ್ ಚಾಲನೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಕಾರಿನ ನಿಯಂತ್ರಣ ಕಳೆದುಕೊಂಡು 2 ಕಟ್ಟಡ, ಲೈಟ್ ಕಂಬ ಹಾಗೂ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಅಮೆರಿಕದಲ್ಲಿ ವಿಸ್ಕಾನ್‍ಸಿನ್‍ನಲ್ಲಿ ನಡೆದಿದೆ.
ಫೋರ್ಡ್ ಟಾರಸ್ ಕಾರ್‍ನಲ್ಲಿದ್ದ ವ್ಯಕ್ತಿ 160 ಕಿಮೀ ವೇಗದಲ್ಲಿ ಚಾಲನೆ ಮಾಡುತ್ತಿದ್ದ ಅಂತ ಇಲ್ಲಿನ ಪೊಲೀಸರು ತಿಳಿಸಿದ್ದಾರೆ. ಕಟ್ಟಡಕ್ಕೆ ಡಿಕ್ಕಿ ಹೊಡೆದ ನಂತರ ಕಾರ್ ನಿಂತಿದ್ದು, ಘಟನೆಯಲ್ಲಿ ಕಾರ್ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವರದಿಯಾಗಿದೆ.
ಈ ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ನೋಡುಗರ ಮೈ ಜುಮ್ಮೆನ್ನುವಂತೆ ಮಾಡಿದೆ.
The post ಸ್ಪೀಡಾಗಿ ಬಂದ ಕಾರ್ ಲೈಟ್ ಕಂಬ, ಮರಕ್ಕೆ ಡಿಕ್ಕಿ ಹೊಡೆದು ಮುಂದೆ ಹೋಯ್ತು! ವಿಡಿಯೋ ನೋಡಿ appeared first on Kannada Public tv.