ಮೀರತ್: ಮಹಿಳೆಯೊಬ್ಬರು ಕಂದಮ್ಮನ ಶವದ ಜೊತೆ ರಾತ್ರಿಯಿಡೀ ಆಸ್ಪತ್ರೆ ಹೊರಗೆ ಕಾಲ ಕಳೆದ ಘಟನೆ ಉತ್ತರಪ್ರದೇಶದ ಮೀರತ್‍ನಲ್ಲಿ ನಡೆದಿದೆ.
ಕಳೆದ ವಾರ ಇಮ್ರಾನಾ ಎಂಬಾಕೆಯ ಎರಡು ವರ್ಷದ ಮಗು ಮೃತಪಟ್ಟಿತ್ತು. ಮಗುವಿನ ಶವವನ್ನ 50 ಕಿಮೀ ದೂರದಲ್ಲಿದ್ದ ತನ್ನ ಊರಿಗೆ ಕೊಂಡೊಯ್ಯಬೇಕಿತ್ತು. ಶವವನ್ನು ಕೊಂಡೊಯ್ಯಲು ಆಂಬುಲೆನ್ಸ್ ಚಾಲಕನನ್ನು ಕೇಳಿದ್ರೆ ಆತ 1500 ರೂ. ಹಣಕ್ಕೆ ಡಿಮ್ಯಾಂಡ್ ಮಾಡಿದ್ದ. ಬಡವರಾಗಿದ್ದ ಇಮ್ರಾನಾ ಆಂಬುಲೆನ್ಸ್‍ಗೆ ಕೊಡಲು ಹಣವಿಲ್ಲದೆ ಇಡೀ ರಾತ್ರಿ ಮಗುವಿನ ಶವವನ್ನ ಮುಂದಿಟ್ಟುಕೊಂಡು ಆಸ್ಪತ್ರೆ ಹೊರಗೆ ಕಾಲ ಕಳೆಯಬೇಕಾಯ್ತು.
ಮರುದಿನ ಬೆಳಿಗ್ಗೆ ಆಕೆಗೆ ಖಾಸಗಿ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಡಲಾಯಿತು ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಕಳೆದ ತಿಂಗಳಷ್ಟೆ ಒರಿಸ್ಸಾದ ವ್ಯಕ್ತಿಯೊಬ್ಬರು ಆಸ್ಪತ್ರೆಯ ಸಿಬ್ಬಂದಿ ಆಂಬುಲೆನ್ಸ್ ನಿರಾಕರಿಸಿದ್ದಕ್ಕೆ ಹೆಂಡತಿಯ ಶವವನ್ನ 10 ಕಿಮೀ ದೂರ ಹೊತ್ತು ನಡೆದ ಬೆನ್ನಲ್ಲೇ ಈ ಪ್ರಕರಣ ವರದಿಯಾಗಿದ್ದು ಮಾನವೀಯತೆಯನ್ನ ಪ್ರಶ್ನಿಸುವಂತಾಗಿದೆ.
ಇದ್ನನೂ ಓದಿ: ಹಣವಿಲ್ಲದೆ ಪತ್ನಿಯ ಶವವನ್ನ 10 ಕಿ.ಮೀ ಹೊತ್ತು ನಡೆದ ಪತಿ!
The post ರಾತ್ರಿಯಿಡೀ ಕಂದಮ್ಮನ ಶವದ ಜೊತೆ ಆಸ್ಪತ್ರೆ ಹೊರಗೆ ಕುಳಿತ ಮಹಿಳೆ appeared first on Kannada Public tv.