Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80032

ನೇತಾಜಿ 1945ರಲ್ಲಿ ಮೃತಪಟ್ಟಿದ್ರು!; ಜಪಾನ್ ತನಿಖಾ ವರದಿಯಲ್ಲೇನಿದೆ?

$
0
0

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ ಚಂದ್ರ ಬೋಸ್ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಪಾನ್ ಸರ್ಕಾರ ಶೀಘ್ರದಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಲಿದ್ದು, ಈ ದಾಖಲೆಯಲ್ಲಿ ನೇತಾಜಿ 1945ರ ವಿಮಾನಾಪಘಾತದಲ್ಲಿ ಮೃತಪಟ್ಟಿದ್ದಾರೆ ಎನ್ನುವ ಅಂಶ ಇದೆ ಎಂದು ಹೇಳಲಾಗುತ್ತಿದೆ.

ನೇತಾಜಿ ನಿಗೂಢ ಸಾವಿನ ಬಗ್ಗೆ ಜಪಾನ್ ಸರ್ಕಾರ ತನಿಖೆ ನಡೆಸಿದ್ದು, ಈ ತನಿಖಾ ವರದಿ ಕೆಲ ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಜಪಾನಿ ಭಾಷೆಯಲ್ಲಿ 7, ಇಂಗ್ಲಿಷ್ ಭಾಷೆಯಲ್ಲಿ 10 ಪುಟಗಳ ಮಾಹಿತಿಯಲ್ಲಿ ನೇತಾಜಿ ಸಾವಿಗೆ ಸಂಬಂಧಿಸಿದ್ದಂತೆ ಪ್ರಮುಖ ವಿವರಗಳಿದ್ದು ಇದನ್ನು ಜಪಾನ್ ಸರ್ಕಾರ ಬಿಡುಗಡೆ ಮಾಡಲಿದೆ.

ತನಿಖಾ ವರದಿಯಲ್ಲಿ ಏನಿದೆ?: 1945 ಆಗಸ್ಟ್ 18ರಂದು ತೈಪೇ ವಾಯುನೆಲೆಯ ಹೊರವಲಯದಲ್ಲಿ ಸಂಭವಿಸಿದ್ದ ವಿಮಾನಾಪಘಾತದಲ್ಲಿ ನೇತಾಜಿ ಗಂಭೀರವಾಗಿ ಗಾಯಗೊಂಡರು. ಬಳಿಕ ಅವರನ್ನು ತೈಪೇ ಸೇನಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದೇ ದಿನ ಸಂಜೆ ಮೃತಪಟ್ಟಿದ್ದಾರೆ. ಆಗಸ್ಟ್ 22 ರಂದು ತೈಪೇ ಸಾರ್ವಜನಿಕಾ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು ಎಂದು ತನಿಖಾ ವರದಿ ಷರಾ ಬರೆದಿದೆ ಎಂದು ವರದಿ ಹೇಳಿದೆ.

ಈ ತನಿಖೆ 1956ಕ್ಕೆ ಪೂರ್ಣಗೊಂಡು ಸರ್ಕಾರ ಜಪಾನ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ತಲುಪಿಸಲಾಗಿತ್ತು. ಆದರೆ ಈ ದಾಖಲೆಗಳನ್ನು ಇದೂವರೆಗೆ ಬಹಿರಂಗ ಪಡಿಸಲಿಲ್ಲ.

ಪಶ್ಚಿಮ ಬಂಗಾಳ ಸರ್ಕಾರ ನಂತರ ಕೇಂದ್ರ ಸರ್ಕಾರ ನೇತಾಜಿ ನಿಗೂಢ ಸಾವಿಗೆ ಸಂಬಂಧಿಸಿದ ದಾಖಲೆಗಳನ್ನು ಈ ಹಿಂದೆ ಬಿಡುಗಡೆ ಮಾಡಿತ್ತು. ಈ ದಾಖಲೆಯಲ್ಲಿ ನೇತಾಜಿ 1945ರ ನಂತರವೂ ಬದುಕಿದ್ದರೂ ಎನ್ನುವ ಬಗ್ಗೆ ಕೆಲ ಪುರಾವೆಗಳು ಸಿಕ್ಕಿತ್ತು. ಅಷ್ಟೇ ಅಲ್ಲದೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತಾಜಿ 1945ರ ನಂತರವೂ ಬದುಕಿದ್ದರು ಎನ್ನುವುದಕ್ಕೆ ಈ ದಾಖಲೆಗಳು ಪುಷ್ಠಿ ನೀಡುತ್ತವೆ ಎಂದ್ದಿದ್ದರು.

ನೇತಾಜಿ ತೈಪೇಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು ಎನ್ನುವುದಕ್ಕೆ ತೈವಾನ್ ಅಧಿಕಾರಿಗಳು ನೀಡಿದ್ದ ದಾಖಲೆಗಳನ್ನು ಇಂಗ್ಲೆಂಡ್‍ನ ವೆಬ್‍ಸೈಟ್ ಈ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಿತ್ತು.

The post ನೇತಾಜಿ 1945ರಲ್ಲಿ ಮೃತಪಟ್ಟಿದ್ರು!; ಜಪಾನ್ ತನಿಖಾ ವರದಿಯಲ್ಲೇನಿದೆ? appeared first on Kannada Public tv.


Viewing all articles
Browse latest Browse all 80032


<script src="https://jsc.adskeeper.com/r/s/rssing.com.1596347.js" async> </script>