ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ನೀತಿಯನ್ನು ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಶುಕ್ರವಾರ ಬಂದ್‍ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ರಜೆ ಘೋಷಣೆಯಾಗಿದ್ದರೆ, ಹಲವು ಜಿಲ್ಲೆಗಳಲ್ಲಿ ಶಾಲೆಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ.
ಸರ್ಕಾರಿ ಶಾಲಾ, ಕಾಲೇಜುಗಳಿಗೆ ರಜೆ ನೀಡುವ ನಿರ್ಧಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡಿದ್ದು, ಸಂಜೆಯ ಬಳಿಕ ರಜೆ ನೀಡಬೇಕೋ? ಬೇಡವೋ ಎನ್ನುವುದರ ಬಗ್ಗೆ ಚರ್ಚೆ ನಡೆದು ತೀರ್ಮಾನವನ್ನು ನಿಧಾನವಾಗಿ ಕೈಗೊಳ್ಳಲಾಗುತ್ತಿದೆ.
ಕರ್ನಾಟಕದ ಅನುದಾನ ರಹಿತ ಶಾಲಾ ಶಿಕ್ಷಣ ಮಂಡಳಿ(ಕ್ಯಾಮ್ಸ್) ತನ್ನ ವ್ಯಾಪ್ತಿಯಲ್ಲಿ ಬರುವ ಶಾಲೆಗಳಿಗೆ ರಜೆ ಘೋಷಿಸಿದೆ. ನಾಳೆಯ ರಜಾ ಅವಧಿಯನ್ನು ಎರಡು ಶನಿವಾರ ಪೂರ್ಣ ತರಗತಿ ಮಾಡಿ ಸರಿದೂಗಿಸುವಂತೆ ತನ್ನ ಸಂಘಟನೆಯ ಶಾಲೆಗಳಿಗೆ ಆದೇಶ ನೀಡಲಾಗಿದೆ ಎಂದು ಪಬ್ಲಿಕ್ ಟಿವಿಗೆ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ತಿಳಿಸಿದ್ದಾರೆ.
ಬೆಂಗಳೂರು ವಿವಿ ದೂರ ಶಿಕ್ಷಣ ವಿಭಾದ ಪರೀಕ್ಷೆಗಳು ಸೆಪ್ಟೆಂಬರ್ 6ಕ್ಕೆ ಮುಂದೂಡಿಕೆಯಾಗಿದೆ ಎಂದು ವಿವಿ ಮೌಲ್ಯಮಾಪನ ಕುಲಸಚಿವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಈ ಜಿಲ್ಲೆಗಳಲ್ಲಿ ಶಾಲೆ ತೆರೆದಿರುತ್ತೆ: ಉಡುಪಿ, ರಾಯಚೂರು, ಕೊಡಗು, ಧಾರವಾಡ, ತುಮಕೂರು, ಶಿವಮೊಗ್ಗ, ವಿಜಯಪುರ, ಉತ್ತರ ಕನ್ನಡ, ಗದಗ, ದಕ್ಷಿಣ ಕನ್ನಡ, ಬಳ್ಳಾರಿ, ಚಿಕ್ಕೋಡಿ, ಕೊಪ್ಪಳ,ಬಾಗಲಕೋಟೆ,ಬೆಳಗಾವಿ,ಮೈಸೂರು,ಆನೇಕಲ್,ಬೀದರ್, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ಚಾಮರಾಜನಗರ
ರಜೆ ಘೋಷಣೆಯಾದ ಜಿಲ್ಲೆಗಳು: ಬೆಂಗಳೂರು ನಗರ, ಚಿಕ್ಕಮಗಳೂರು, ಕೋಲಾರ,
ಇದನ್ನೂ ಓದಿ: ಭಾರತ್ ಬಂದ್ ಗೆ ಸಂಬಂಧಿಸಿದ ಎಲ್ಲ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
The post ಭಾರತ್ ಬಂದ್; ನಾಳೆ ಶಾಲೆಗಳಿಗೆ ಎಲ್ಲಿ ರಜೆ? ಎಲ್ಲಿ ಓಪನ್ ಇರುತ್ತೆ? appeared first on Kannada Public tv.