Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80042

ಕಾಣೆಯಾದ ಗೂಳಿ ಪತ್ತೆ ಹಚ್ಚಿದವರಿಗೆ 50 ಸಾವಿರ ರೂ ಬಹುಮಾನ

$
0
0

ವಾರಣಾಸಿ: ಪ್ರೀತಿಯಿಂದ ಸಾಕಿದ ಹಸುವೋ ಎಮ್ಮೆಯೋ ಕಳೆದುಹೋದ್ರೆ ಊರೆಲ್ಲಾ ಹುಡುಕಾಡ್ತಾರೆ. ಇನ್ನೂ ಹೆಚ್ಚೆಂದರೆ ಕಳೆದುಹೋದ ರಾಸು ಬೇಗ ಮರಳಿ ಮನೆಗೆ ಬರಲಿ ಅಂತ ಹರಕೆ ಕಟ್ಟಿಕೊಳ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ತನ್ನ ಕಳೆದುಹೋದ ಹಸುವನ್ನು ಹುಡುಕಿಕೊಟ್ಟವರಿಗೆ 50 ಸಾವಿರ ರೂ ಬಹುಮಾನ ನೀಡೋದಾಗಿ ಪ್ರಕಟಿಸಿದ್ದಾರೆ.

ವಾರಣಾಸಿಯ ನಿವಾಸಿ ಮನೋಜ್ ಪಾಂಡೆ ಬಾದ್‍ಷಾ ಎಂಬ ಹೆಸರಿನ 3 ವರ್ಷದ ಗೂಳಿಯ ಬಗ್ಗೆ ನಿಖರ ಮಾಹಿತಿ ನೀಡಿದವರಿಗೆ 50 ಸಾವಿರ ರೂ. ಬಹುಮಾನ ನೀಡಲಾಗುತ್ತೆ ಅಂತ ಕರಪತ್ರ ಮುದ್ರಿಸಿ ನಗರದ ಬೀದಿಬೀದಿಗಳಲ್ಲಿ ಅಂಟಿಸಿದ್ದಾರೆ. ಇದಲ್ಲದೆ ಕಾಣೆಯಾಗಿರುವ ಗೂಳಿಯ ಬಗ್ಗೆ ಸಾರನಾತ್ ಪೊಲಿಸ್ ಠಾಣೆಯಲ್ಲಿ ದೂರನ್ನು ಕೂಡ ದಾಖಲಿಸಿದ್ದಾರೆ.

ಬಾದ್‍ಷಾ ಹುಟ್ಟಿದಾಗಿನಿಂದ ನಮ್ಮ ಜೊತೆಯಲ್ಲೇ ಇದ್ದ. ಈಗ ಆತ ಕಾಣೆಯಾಗಿರುವುದರಿಂದ ಸ್ವಂತ ಮಗನನ್ನೇ ಕಳೆದುಕೊಂಡಷ್ಟು ನೋವಾಗುತ್ತಿದೆ ಅಂತಾರೆ ಗೂಳಿಯ ಮಾಲೀಕ ಮನೋಜ್ ಪಾಂಡೆ.

The post ಕಾಣೆಯಾದ ಗೂಳಿ ಪತ್ತೆ ಹಚ್ಚಿದವರಿಗೆ 50 ಸಾವಿರ ರೂ ಬಹುಮಾನ appeared first on Public TV.


Viewing all articles
Browse latest Browse all 80042


<script src="https://jsc.adskeeper.com/r/s/rssing.com.1596347.js" async> </script>