ಸೈಬೀರಿಯಾ: ಅಕಸ್ಮಾತಾಗಿ ಮೀನುಗಳು ಆತ್ಮಹತ್ಯೆಗೆ ಯತ್ನಿಸುತ್ತವೆ ಅಂದ್ರೆ ಯಾರಾದ್ರೂ ನಂಬ್ತಾರ ಸಾಧ್ಯನೇ ಇಲ್ಲ. ಆದ್ರೆ ಮೀನುಗಳು ಡಾನ್ಸ್ ಮಾಡ್ತಾವೆ ಅಂದ್ರೆ ನಂಬ್ತಾರೆ. ಅದೇ ರೀತಿ ಮೀನೊಂದು ಡಾನ್ಸ್ ಮಾಡಿ ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ರಷ್ಯಾದ ಸೈಬೀರಿಯಾ ಪ್ರಾಂತ್ಯದ ಮಾರುಕಟ್ಟೆಯೊಂದರಲ್ಲಿ ಸ್ಟರ್ಜಿಯನ್ ಎಂಬ ಹೆಸರಿನ ಮೀನೊಂದು ಅಕ್ವೇರಿಯಂನಲ್ಲಿ ಡಾನ್ಸ್ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದಿದೆ. ತಲೆಯನ್ನು ನೀರಿನಿಂದ ಮೇಲಕ್ಕೆ ಎತ್ತಿ ದೇಹವನ್ನು ನೀರಿನಲ್ಲಿ ಕುಣಿಸುತ್ತಿದ್ದ ದೃಶ್ಯವನ್ನು ಗ್ರಾಹಕರೊಬ್ಬರು ಸೆರೆಹಿಡಿದಿದ್ದಾರೆ.
ಕೆಲವೊಬ್ಬರು ಇದನ್ನು ಡಾನ್ಸ್ ಎಂದರೆ, ಇನ್ನೂ ಕೆಲವರು ಅಕ್ವೇರಿಯಂನಲ್ಲಿ ಇದ್ದೂ ಬೇಜಾರಾಗಿ ಅದರಿಂದ ಹೊರಬರಲು ಮಾಡುತ್ತಿರುವ ಪ್ರಯತ್ನ ಇದಾಗಿದೆ ಎಂದಿದ್ದಾರೆ. ಏನೇ ಆಗಲಿ ವಿಭಿನ್ನ ಡಾನ್ಸ್ ಮೂಲಕ ಮೀನೀಗಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
The post ಅಕ್ವೇರಿಯಂ ಡಾನ್ಸ್ ಮಾಡಿ ಸುದ್ದಿ ಮಾಡಿದೆ ಈ ಮೀನು! appeared first on Public TV.