ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ತವರಿನಲ್ಲಿ ನಡೆಯಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿ ಮಾಧ್ಯಮದ ವ್ಯಕ್ತಿಗಳನ್ನು ರಕ್ಷಿಸಿದ್ದಾರೆ ಎಂದು ಗುಜರಾತ್ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಹೇಳಿದ್ದಾರೆ.
ಮೋದಿ ಇಂದು ಜಾಮ್‍ನಗರದಲ್ಲಿ ನೀರಾವರಿಗೆ ಸಂಬಂಧಿಸಿದ ಸೌರಷ್ಟ್ರ ನರ್ಮದಾ ಅವತರಣ್ ಯೋಜನೆಯನ್ನು ಉದ್ಘಾಟಿಸಿದ್ದರು.
ಮೋದಿಯವರು ಬಟನ್ ಒತ್ತಿ ಉದ್ಘಾಟನೆ ಮಾಡಿದ ಬಳಿಕ ಜಲಾಶಯದಿಂದ ಗೇಟ್ ಓಪನ್ ಆಗಿ ನೀರು ಹರಿಯಲು ಆರಂಭಿಸಿದೆ. ನೀರು ಹರಿಯುವುದನ್ನೇ ನೋಡುತ್ತಿದ್ದ ವೇಳೆ ಮೋದಿ ಜಲಾಶಯದ ಕೆಳಭಾಗದಲ್ಲಿ ಮಾಧ್ಯಮದವರು ಫೋಟೋ ತೆಗೆಯುತ್ತಿರುವುದನ್ನು ನೋಡಿದ್ದಾರೆ. ಕೂಡಲೇ ಮೋದಿ ಚಪ್ಪಾಳೆ ತಟ್ಟಿ ಮಾಧ್ಯಮದ ವ್ಯಕ್ತಿಗಳನ್ನು ಬೇರೆಡೆಗೆ ತರಳುವಂತೆ ಎಚ್ಚರಿಸಿದ್ದಾರೆ.
ಕ್ಯಾಮೆರಾಮನ್ ಮತ್ತು ಫೋಟೋಗ್ರಾಫರ್‍ಗಳು ತಮ್ಮ ಕೆಲಸದಲ್ಲಿ ಬ್ಯುಸಿ ಇದ್ದರು. ಅವರಿಗೆ ನಾವು ಅಪಾಯದ ಸ್ಥಳದಲ್ಲಿ ಇದ್ದೇವೆ ಎನ್ನುವುದು ಗಮನಕ್ಕೆ ಬಂದಿರಲಿಲ್ಲ. ಒಂದು ವೇಳೆ ಪ್ರಧಾನಿಯವರಿಂದ ಈ ಸೂಚನೆ ಬಾರದೇ ಇದ್ದರೇ ದೊಡ್ಡ ದುರಂತ ಸಂಭವಿಸುತಿತ್ತು ಎಂದು ನಿತೀನ್ ಪಟೇಲ್ ಹೇಳಿದ್ದಾರೆ.
The post ಅನಾಹುತವನ್ನು ತಪ್ಪಿಸಿ ಪತ್ರಕರ್ತರನ್ನು ರಕ್ಷಿಸಿದ ಪ್ರಧಾನಿ ಮೋದಿ appeared first on Kannada Public tv.