ಧಾರವಾಡ: ರಾಜ್ಯದಲ್ಲಿ ಕೋಮುವಾದ ಹೆಚ್ಚಲು ವೀರಶೈವ ಲಿಂಗಾಯತರು ಕಾರಣವೆಂದು ಹೇಳುವ ಮೂಲಕ ಸಾಹಿತಿ ಚಂಪಾ ವಿವಾದವನ್ನು ಸೃಷ್ಟಿಸಿದ್ದಾರೆ.
ಹಿರಿಯ ಸಂಶೋಧಕ ಸಾಹಿತಿ ಡಾ ಎಂ ಎಂ ಕಲಬುರ್ಗಿ ಅವರು ಹಂತಕರ ಗುಂಡಿಗೆ ಬಲಿಯಾಗಿ ಇಂದಿಗೆ ಒಂದು ವರ್ಷವಾದರೂ ಹಂತಕರ ಸುಳಿವು ಇನ್ನೂ ಸಿಗದೇ ಇರುವ ಹಿನ್ನೆಲೆಯಲ್ಲಿ ಇಂದು ವಿಚಾರವಾದಿಗಳು, ಸರ್ಕಾರಗಳ ವಿರುದ್ಧ ಚಾಟಿ ಬೀಸಿದರು.
ಈ ವೇಳೆ ಸಾಹಿತಿ ಚಂದ್ರಶೇಖರ್ ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಕೋಮುವಾದ ಹೆಚ್ಚಲು ವೀರಶೈವ ಲಿಂಗಾಯತರು ಕಾರಣ. ಕೋಮುವಾದ ಬೆಳೆಯಲು ಈ ಎರಡು ಸಮುದಾಯಗಳು ಹೆಗಲು ಕೊಡುತ್ತಿವೆ. ಅಲ್ಲದೇ ಬಸವಣ್ಣನವರ ಹೆಸರು ಹೇಳಿಕೊಂಡು, ರಾಜಕೀಯ ಮಾಡಿಕೊಂಡು ಬದುಕುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಂದೂಕು ನೀಡಿ: ಇತ್ತ ಭಗವಾನ್ ಕೂಡ ದಲಿತರ ಪರ ಹೇಳಿಕೆ ನೀಡಿದ್ದು, ಸರ್ಕಾರಗಳಿಂದ ದಲಿತರ ರಕ್ಷಣೆ ಸಾಧ್ಯವಿಲ್ಲ, ಹೀಗಾಗಿ ಅವರ ಕೈಗೆ ಬಂದೂಕು ನೀಡಿದರೆ ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.
ಎಲ್ಲರೂ ದಲಿತರ ಪರ ಅಂತಾ ಕಣ್ಣೀರು ಸುರಿಸುತ್ತಾರೆ. ಆದರೆ ದಲಿತರು ರಕ್ತ ಸುರಿಸೋದನ್ನು ಯಾರೂ ನಿಲ್ಲಿಸುತ್ತಿಲ್ಲ. ಪೊಲೀಸ್ರಿಂದ, ಸೈನಿಕರಿಂದ ದಲಿತರ ರಕ್ಷಣೆ ಸಾಧ್ಯವಾಗುತ್ತಿಲ್ಲ, ಹೀಗಾಗಿ ದಲಿತರ ರಕ್ಷಣೆಗೆ ಬಂದೂಕು ಕೊಡಿ ಎಂದು ಪ್ರೊ. ಕೆ.ಎಸ್.ಭಗವಾನ್ ಮಾತನಾಡಿದ್ದಾರೆ.
The post ವೀರಶೈವ ಲಿಂಗಾಯತರಿಂದ ರಾಜ್ಯದಲ್ಲಿ ಕೋಮುವಾದ ಹೆಚ್ಚುತ್ತಿದೆ: ಚಂಪಾ appeared first on Kannada Public tv.