ಹಾಂಕಾಂಗ್: ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳ ಮೂಲಕ ಗ್ರಾಹಕರನ್ನ ಆಕರ್ಷಣೆ ಮಾಡಲು ರೆಸ್ಟೋರೆಂಟ್‍ಗಳು ಪ್ಲಾನ್ ಮಾಡಿವೆ. ಕೆಲವು ದಿನಗಳ ಹಿಂದೆಯಷ್ಟೇ ಲಾಸ್ ಏಂಜಲೀಸ್‍ನಲ್ಲಿ ನಾಯಿಗಳ ಕೆಫೆ ನೋಡಿದ್ರಿ. ಇದೀಗ ವಿಶ್ವದ ಮೊದಲ ಮೊಲಗಳ ಕೆಫೆ ಆರಂಭವಾಗಿದೆ.
ಹೌದು. ಹಾಂಕಾಂಗ್‍ನಲ್ಲಿ ವಿಶ್ವದ ಮೊದಲ ಮೊಲಗಳ ಕೆಫೆ ಓಪನ್ ಆಗಿದ್ದು, ಮೊಲಗಳನ್ನ ಇಷ್ಟ ಪಡುವವರು ಇಲ್ಲಿ ಇನ್ನಷ್ಟು ಅವುಗಳೊಂದಿಗೆ ಬೆರೆಯಬಹುದು, ಕಾಲಾಹರಣ ಮಾಡಬಹುದಾಗಿದೆ. ಈ ಕೆಫೆಗೆ ರಾಬಿಟ್‍ಲ್ಯಾಂಡ್ ಎಂದು ಹೆಸರಿಡಲಾಗಿದ್ದು, ಮೊಲಗಳಿಂದಲೇ ಈ ಕೆಫೆ ಗ್ರಾಹಕರನ್ನ ತನ್ನತ್ತ ಸೆಳೆಯುತ್ತಿದೆ.
ಮೊಲಗಳ ಥೀಮ್‍ನಲ್ಲಿ ಈ ರೆಸ್ಟೋರೆಂಟ್ ಇರುವುದರಿಂದ ಅವುಗಳಿಗೆ ತೊಂದರೆಯಾಗದಂತೆ ಗಮನಹರಿಸಲಾಗಿದೆ. ಅದರಲ್ಲೂ ಇಲ್ಲಿಗೆ ಬರುವ ಗ್ರಾಹಕರು ಮೊಲಗಳನ್ನ ಮುಟ್ಟಬಹುದೇ ಹೊರತು ಎತ್ತಿಕೊಳ್ಳುವಂತಿಲ್ಲವೆಂದು ಸೂಚನೆ ನೀಡಲಾಗಿದೆ. ಅಲ್ಲದೇ ಇಲ್ಲಿ ಊಟ ಮಾಡಲು ಬಂದೂ ಮೊಲಗಳಿಗೆ ಯಾವುದೇ ರೀತಿಯಲ್ಲೂ ಗಾಯಗೊಳಿಸುವಂತಿಲ್ಲವೆಂದೂ ರೆಸ್ಟೋರೆಂಟ್ ಖಡಕ್ ಆದೇಶ ನೀಡಿದೆ.
The post ವಿಶ್ವದ ಮೊದಲ ಮೊಲಗಳ ಕೆಫೆ: ಪ್ರಾಣಿಪ್ರಿಯರಿಗೆ ಒಳ್ಳೆ ಟೈಂಪಾಸ್! appeared first on Kannada Public tv.