ಮುಂಬೈ: ಬಾಲಿವುಡ್ ನಿರ್ದೇಶಕ ಕರಣ್ ಜೋಹಾರ್ ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಬಳಿಕ ಮತ್ತೆ ಟ್ರ್ಯಾಕ್‍ಗೆ ಮರಳಿದ್ದಾರೆ. ಇದೀಗ ಅವರ ಬಹುನಿರೀಕ್ಷಿತ ಚಿತ್ರ ಎ ದಿಲ್ ಹೇ ಮುಷ್ಕಿಲ್ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ತ್ರಿಕೋನ ಪ್ರೇಮಕತೆಯಲ್ಲಿ ಸಖತ್ ಟ್ವಿಸ್ಟ್ ಇದ್ದು, ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ.
ಎ ದಿಲ್ ಹೇ ಮುಷ್ಕಿಲ್ ಹೆಸರೇ ಹೇಳುವಂತೆ, ಚಿತ್ರದಲ್ಲೂ ರಣ್‍ಬೀರ್ ಕಪೂರ್ ಗ್ಲಾಮರಸ್ ಅನುಷ್ಕಾ ಶರ್ಮಾ ಹಾಗೂ ಐಶ್ವರ್ಯಾ ರೈ ಬಚ್ಚನ್ ಜೊತೆಗೆ ರೊಮ್ಯಾನ್ಸ್ ಮಾಡಿದ್ದಾರೆ. ಆದ್ರೆ ಇಲ್ಲಿ ರಣ್‍ಬೀರ್‍ಗೆ ಕೊನೆಗೆ ಸಿಗೋರ್ಯಾರೂ ಅನ್ನೋದೆ ಟ್ವಿಸ್ಟ್. ಈ ಮೂವರ ಜೊತೆಗೆ ಫಾವದ್ ಖಾನ್ ಕೂಡ ಚಿತ್ರದಲ್ಲಿ ಮಿಂಚಿದ್ದಾರೆ.
ಟೀಸರ್‍ನಲ್ಲಿ ರಣ್‍ಬೀರ್ ಕಪೂರ್ ಇಬ್ಬರು ನಟಿಯರ ಜೊತೆಗೆ ರೊಮ್ಯಾನ್ಸ್ ಮಾಡುತ್ತಿದ್ದಾರೆ. ಚಿತ್ರದ ಟೀಸರ್ ಸೋಮವಾರದಿಂದ ಟ್ರೆಂಡಿಂಗ್‍ನಲ್ಲಿದ್ದು, ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಕರಣ್ ಜೋಹಾರ್ ಇದೊಂದು ಪ್ರೀತಿ ಉತ್ಸಾಹದ ಜೊತೆಗೆ ಗೆಳೆತನ ಹಾಗೂ ಭಾವನಾತ್ಮಕ ಸವಾರಿ ಎಂದು ಹೇಳಿಕೊಂಡಿದ್ದಾರೆ.
The post ಎಡಿಹೆಚ್‍ಎಂನಲ್ಲಿ ರಣ್‍ಬೀರ್ ಜೊತೆಗೆ ಅನುಷ್ಕಾ, ಐಶ್ ರೊಮ್ಯಾನ್ಸ್ ಮತ್ತು ಬ್ರೇಕಪ್! appeared first on Kannada Public tv.