ವಾಷಿಂಗ್ಟನ್: ಪುಟ್ಟ ಮಕ್ಕಳು ತೊದಲು ಭಾಷೆಯಲ್ಲಿ ಮಾತನಾಡಿದ್ರೆ ಅಥವಾ ಹಾಡು ಹಾಡಿದ್ರೆ ಕೇಳೋಕೆ ಮುದ್ದಾಗಿರುತ್ತೆ. ಹಾಗೆ ಮಕ್ಕಳು ಒಮ್ಮೊಮ್ಮೆ ರಾಗವಾಗಿ ಎ..ಬಿ…ಸಿ…ಡಿ.. ಅಂತ ಹಾಡೋದನ್ನ ಕೇಳಿರ್ತೀವಿ. ಹಾಗೆ ಇಲ್ಲೊಬ್ಬ ಪುಟ್ಟ ಪೋರಿ ತನ್ನದೇ ಶೈಲಿಯಲ್ಲಿ ಎಬಿಸಿಡಿ ಆಲ್ಫಬೆಟ್‍ಗಳನ್ನ ರಾಗವಾಗಿ ಹೇಳಿದ್ದು ಇದರ ವಿಡಿಯೋ ಈಗ ವೈರಲ್ ಆಗಿದೆ.
ಅಮೆರಿಕದ ಲೂಸಿಯಾನಾದ 2 ವರ್ಷದ ಪೋರಿ ವೈಲೆಟ್ ಏರು ಧ್ವನಿಯಲ್ಲಿ ರಾಗವಾಗಿ ಏರಿಳಿತಗಳೊಂದಿಗೆ ಎಬಿಸಿಡಿ ಹೇಳಿದ್ದಾಳೆ. ಆಕೆ ಎ ಯಿಂದ ಶುರು ಮಾಡಿ ಝೆಡ್ ಹೇಳುವ ತನಕ ಅಕೆಯ ಉತ್ಸಾಹ ಎಲ್ಲೂ ಕುಗ್ಗಲಿಲ್ಲ. ಕೊನೆಗೆ ಅಲ್ಲಿದ್ದವರು ವೈಲೆಟ್ ಹಾಡಿದ ಹಾಡಿಗೆ ಚಪ್ಪಾಳೆ ತಟ್ಟಿ ಶಹಬಾಸ್ ಎಂದಿದ್ದಾರೆ.
ಈ ವಿಡಿಯೋವನ್ನ ವೈಲೆಟ್ ತಾಯಿ ಕ್ರಿಸ್ಟೀನಾ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದು 30 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ.
The post ಈ ಪುಟ್ಟ ಪೋರಿಯ ಎಬಿಸಿಡಿ ಹಾಡು ಈಗ ವೈರಲ್ appeared first on Kannada Public tv.