Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80475

ಪದವಿ ಕಾಲೇಜು ಬೋಧಕರಾಗಲು ಯುಜಿಸಿ ನಿಯಮದಲ್ಲಿ ಸಡಿಲಿಕೆ

$
0
0

ನವದೆಹಲಿ: ಜುಲೈ 11, 2009ಕ್ಕಿಂತಲೂ ಮೊದಲು ಪಿಎಚ್‍ಡಿ ಮತ್ತು ಎಂಫಿಲ್ ಪದವಿಗಳನ್ನು ಶೈಕ್ಷಣಿಕ ಅರ್ಹತೆಗನುಗುಣವಾಗಿ ಮಾನ್ಯ ಮಾಡಲು ಯುಜಿಸಿ ನಿರ್ಧರಿಸಿದೆ. ಇದರಿಂದಾಗಿ 2009ಕ್ಕಿಂತಲೂ ಮೊದಲು ಎಂಫಿಲ್ ಪಿಎಚ್‍ಡಿ ಪದವಿ ಪಡೆದವರಿಗೆ ಸ್ವಲ್ಪ ನಿರಾಳ ಸಿಕ್ಕಂತಾಗಿದೆ.

ಇಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಸ್ಮೃತಿ ಇರಾನಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿಶ್ವವಿದ್ಯಾಲಯ ಮತ್ತು ಪದವಿ ಕಾಲೇಜುಗಳಿಗೆ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಲು ಎನ್‍ಇಟಿ ಪರೀಕ್ಷೆ ಅಥವಾ ರಾಜ್ಯ ಸರ್ಕಾರಗಳ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಡ್ಡಾಯವಾಗಿತ್ತು.

ಆದರೆ 2009ಕ್ಕೂ ಮೊದಲು ಎಂಫಿಲ್ ಮತ್ತು ಪಿಎಚ್‍ಡಿ ಪಡೆದವರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಅವರೆಲ್ಲರೂ ಎನ್‍ಇಟಿ ಸೇರಿದಂತೆ ರಾಜ್ಯ ಸರ್ಕಾರಗಳು ನಡೆಸುವ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದದಿದ್ದರೂ ವಿಶ್ವವಿದ್ಯಾಲಯಗಳ ಮತ್ತು ಪದವಿ ಕಾಲೇಜುಗಳ ಬೋಧಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಆದರೆ ಎನ್‍ಇಟಿ ಮತ್ತು ರಾಜ್ಯ ಸರ್ಕಾರಗಳು ನಡೆಸುವ ಪರೀಕ್ಷೆಗಳಿಂದ ವಿನಾಯಿತಿ ಪಡೆಯಲು ಷರತ್ತುಗಳನ್ನು ವಿಧಿಸಿದೆ. ಪಿಹೆಚ್‍ಡಿ ಮಾಡಿದವರ ಸಂಶೋಧನಾ ಪ್ರಬಂಧವನ್ನು ಇಬ್ಬರು ಹೊರಗಿನ ಪರಿವೀಕ್ಷಕರು ಮೌಲ್ಯಮಾಪನ ಮಾಡಿರಬೇಕು. ಅಭ್ಯರ್ಥಿಯು ಕಡ್ಡಾಯವಾಗಿ ಮೌಖಿಕ ಸಂದರ್ಶನದಲ್ಲಿ ಹಾಜರಾಗಿರಬೇಕು ಮತ್ತು ಪಿಹೆಚ್‍ಡಿ ಪ್ರಬಂಧಕ್ಕೆ ಸಂಬಂಧಿಸಿದಂತೆ ಸಂಶೋಧನಾ
ಪತ್ರಿಕೆಗಳಲ್ಲಿ ಎರಡು ಸಂಶೋಧನಾ ಲೇಖನಗಳನ್ನು ಪ್ರಕಟಿಸಿರಬೇಕು. ಕೊನೆಯದಾಗಿ ಅಭ್ಯರ್ಥಿಯು ಎರಡು ಸೆಮಿನಾರ್‍ನಲ್ಲಿ ಪ್ರಬಂಧ ಮಂಡಿಸಿರಬೇಕು ಎಂಬ ಷರತ್ತು ವಿಧಿಸಿದೆ.

ಇದಲ್ಲದೆ ಮಹಿಳಾ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಪಿಹೆಚ್‍ಡಿ ಪೂರೈಸಲು ಪ್ರಸ್ತುತವಿರುವ 6 ವರ್ಷಗಳಿಂದ 8 ವರ್ಷಗಳಿಗೆ ಕಾಲಾವಧಿಯನ್ನು ವಿಸ್ತರಿಸಲಾಗಿದೆ.

The post ಪದವಿ ಕಾಲೇಜು ಬೋಧಕರಾಗಲು ಯುಜಿಸಿ ನಿಯಮದಲ್ಲಿ ಸಡಿಲಿಕೆ appeared first on Public TV.


Viewing all articles
Browse latest Browse all 80475

Trending Articles


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮದುವೆಯಾಗಲು ನಿರ್ಧರಿಸಿದ್ದಾರೆ ಅಮ್ಮ- ಮಗ


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!