ಉಮನ್: ಇತ್ತೀಚೆಗೆ ಮೊಬೈಲ್ ಕ್ರೇಜ್ ಎಷ್ಟೋ ಹೆಚ್ಚಾಗಿದೆಯೋ ಅಷ್ಟೇ ಹೆಡ್‍ಫೋನ್ ಕಿವಿಗೆ ಹಾಕೊಂಡು ಹಾಡುಕೇಳುವ ಕ್ರೇಜ್ ಇದೆ. ಇದೇ ರೀತಿ ಮಹಿಳೆಯೊಬ್ಬರು ಹೆಡ್‍ಫೋನ್ ಧರಿಸಿ ರೈಲ್ವೆ ಟ್ರ್ಯಾಕ್ ಕ್ರಾಸ್ ಮಾಡಬೇಕಾದ್ರೆ ರೈಲು ಡಿಕ್ಕಿ ಹೊಡೆದಿದ್ದು ಅದೃಷ್ಟವಶಾತ್ ಬದುಕುಳಿದಿದ್ದಾರೆ.
ಹೌದು. ಉಕ್ರೇನ್‍ನಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಹೆಡ್‍ಫೋನ್ ಹಾಕಿಕೊಂಡಿದ್ದ ಮಹಿಳೆ ರೈಲು ಬರುತ್ತಿರುವುದನ್ನು ಗಮನಿಸದೇ ಹಳಿ ದಾಟಬೇಕಾದ್ರೆ ವೇಗವಾಗಿ ಬಂದ ರೈಲು ಆಕೆಗೆ ಡಿಕ್ಕಿ ಹೊಡೆದಿದೆ.ಡಿಕ್ಕಿ ಹೊಡೆದ ಬರಕ್ಕೆ ರೈಲಿನ ಜೊತೆಯಲ್ಲೇ ಹಳಿ ಮೇಲೆ ಆಕೆಯೂ ಸಿಲುಕಿಕೊಂಡು ಸ್ವಲ್ಪದೂರ ಹೋಗಿದ್ದಾಳೆ.
ರೈಲು ಡಿಕ್ಕಿ ಹೊಡೆದ ಬರಕ್ಕೆ ಆಕೆ ಅಲ್ಲೇ ಸಾವನ್ನಪ್ಪಬೇಕಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸದ್ಯ ರೈಲು ಸಾಗಿದ ನಂತರ ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೋಮದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
The post ರೈಲು ಡಿಕ್ಕಿ ಹೊಡೆದ್ರು ಅಪಾಯದಿಂದ ಪಾರಾದ್ಲು! appeared first on Public TV.