ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಬೇಸಿಗೆ ತುಸು ಹೆಚ್ಚು ಸುಡಲಿದೆ. ಇಂಗ್ಲೆಂಡ್ ಹವಮಾನ ಇಲಾಖೆಯ ಪ್ರಕಾರ ವಿಶ್ವದಾದ್ಯಂತ ಉಷ್ಣಾಂಶ ಏರಿಕೆಯಾಗಲಿದೆ. ಎಲ್ಲೆಡೆ ಈ ವರ್ಷ 1 ಡಿಗ್ರಿಯಷ್ಟು ಉಷ್ಣಾಂಶ ಏರಿಕೆಯಾಗಲಿದೆ ಅಂತ ಮುನ್ಸೂಚನೆ ನೀಡಲಾಗಿದೆ.
2015ರಲ್ಲಿ ಬೆಂಗಳೂರಿನಲ್ಲಿಯೇ 36 ಡಿಗ್ರಿ ಸೆಲ್ಶಿಯಸ್‍ನಷ್ಟು ಗರಿಷ್ಠ ಉಷ್ಣಾಂಶ ದಾಖಲಾಗಿ ಅತ್ಯಂತ ಹೆಚ್ಚು ಉಷ್ಣಾಂಶವಿದ್ದ ವರ್ಷ ಎಂದು ಕರೆಯಲಾಗಿತ್ತು. ಆದ್ರೆ ಈ ವರ್ಷ ಇನ್ನು ಹೆಚ್ಚು ಉಷ್ಣಾಂಶ ದಾಖಲಾಗುವ ಸಾಧ್ಯತೆಯಿದೆ. ಉಷ್ಣಾಂಶ ಏರಿಕೆಗೆ ಎಲ್ನಿನೋ ಎಫೆಕ್ಟ್ ಮತ್ತು ಜಾಗತಿಕ ತಾಪಮಾನ ಕಾರಣ ಎನ್ನಲಾಗಿದೆ.
ಈಗಾಗ್ಲೇ ರಾಜ್ಯದಲ್ಲಿ ಜನವರಿ ಮತ್ತು ಫೆಬ್ರವರಿಯಲ್ಲಿಯೇ 2 ರಿಂದ 3 ಡಿಗ್ರಿ ಉಷ್ಣಾಂಶ ಏರಿಕೆಯಾಗಿದೆ. ಇನ್ನು ಮಾರ್ಚ್ ಮತ್ತು ಏಪ್ರಿಲ್ ವೇಳೆಗೆ ಕಳೆದ ವರ್ಷಕ್ಕಿಂತ 1 ಡಿಗಿಯಷ್ಟ್ರು ಹೆಚ್ಚಿನ ಉಷ್ಣಾಂಶ ದಾಖಲಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿರ್ದೇಶಕರಾದ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.