ನವದೆಹಲಿ: ಬಜಾಜ್ ಆಟೋ ಕಂಪನಿ 1 ಲೀಟರ್ ಪೆಟ್ರೋಲ್‍ಗೆ 100 ಕಿ.ಮೀ ಮೈಲೇಜ್ ನೀಡುವ ಹೊಸ ಬೈಕ್ ಒಂದನ್ನು ಬಿಡುಗಡೆ ಮಾಡಿದೆ.
ತನ್ನ ಹಳೆಯ ಸಿಟಿ 100ನ ಹೊಸ ಮಾದರಿಯ ಸಿಟಿ 100ಬಿ ಬಿಡುಗಡೆ ಮಾಡಿದ್ದು, 30,990 ರೂ.(ದೆಹಲಿ ಶೋರೂಂ) ಬೆಲೆಯನ್ನು ನಿಗದಿ ಮಾಡಿದೆ. 99 ಸಿಸಿ ಇಂಜಿನ್ ಹೊಂದಿರುವ 8.2 ಪಿಎಸ್ ಪವರ್ ಹೊಂದಿದೆ. ಹಿಂದಿನ ಸಿಟಿ 100 ಬೈಕ್‍ಗಿಂತ ಈ ಬೈಕ್ ಪ್ರತಿ ಲೀಟರ್ 9.6 ಕಿ.ಮೀ ಹೆಚ್ಚುವರಿ ಮೈಲೇಜ್ ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ.
ಕಳೆದ ಫೆಬ್ರವರಿಯಿಂದ ಇಲ್ಲಿಯರೆಗೆ ಒಟ್ಟು 5 ಲಕ್ಷಕ್ಕೂ ಹೆಚ್ಚು ಸಿಟಿ 100 ಬೈಕ್‍ಗಳನ್ನು ಮಾರಾಟ ಮಾಡಿದ್ದೇವೆ ಎಂದು ಬಜಾಜ್ ಆಟೋ ಮೋಟರ್ ಸೈಕಲ್ ಬ್ಯುಸಿನೆಸ್ ಅಧ್ಯಕ್ಷ ಎರಿಕ್ ವಾಸ್ ತಿಳಿಸಿದ್ದಾರೆ.