ಬೆಂಗಳೂರು: ಸ್ಕೂಟಿಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಬೆಂಗಳೂರು ನಿವಾಸಿಯಾದ ಫ್ಯಾಶನ್ ಡಿಸೈನರ್ ಸಾವನ್ನಪ್ಪಿದ್ದಾರೆ.
ಸುಮನಹಳ್ಳಿ ಮೇಲ್ಸೇತುವೆ ಬಳಿ ಘಟನೆ ನಡೆದಿದೆ. 21 ವರ್ಷದ ಅಮೂಲ್ಯ ಮೃತ ಫ್ಯಾಷನ್ ಡಿಸೈನರ್. ಈಕೆ ಜಿಮ್ ಮುಗಿಸಿ ಪಾಪಿರೆಡ್ಡಿಪಾಳ್ಯದಲ್ಲಿರುವ ಮನೆಗೆ ತೆರಳುವಾಗ ಅಪಘಾತ ಸಂಭವಿಸಿದೆ. ಈ ವೇಳೆ ಅಮೂಲ್ಯ ಹೆಲ್ಮೆಟ್ ಧರಿಸಿರಲಿಲ್ಲ.
ಘಟನೆ ಬಗ್ಗೆ ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
The post ಬೆಂಗಳೂರು: ಸ್ಕೂಟಿಗೆ ಕಾರು ಡಿಕ್ಕಿ ಹೊಡೆದು ಫ್ಯಾಷನ್ ಡಿಸೈನರ್ ಸಾವು appeared first on Kannada Public tv.