ಬೀದರ್: ಸಂಗೀತ ವಾದ್ಯಗಳಿದ್ದರೂ ರಾಷ್ಟ್ರಗೀತೆಯನ್ನು ನುಡಿಸುವುದು ಕಷ್ಟ. ಆದ್ರೆ ಬೀದರ್ ಜಿಲ್ಲೆ ಔರಾದ್ ತಾಲೂಕಿನ ಸುಂಧಾಳ ಗ್ರಾಮದ ಅಬ್ರಾಹಂ ಇಸ್ಮಾಯಿಲ್ ಮೇತ್ರಿ ಎಂಬವರು ಆಲದ ಎಲೆಯಲ್ಲಿ ರಾಷ್ಟ್ರಗೀತೆ ನುಡಿಸುತ್ತಾರೆ.
ಹೈದ್ರಾಬಾದ್ ಕರ್ನಾಟದಲ್ಲಿ `ಸನಾಧಿ ಅಬ್ರಾಹಂ’ ಎಂದೇ ಖ್ಯಾತರಾಗಿರುವ ಇವರು 35 ವರ್ಷಗಳಿಂದ ಆಲದ ಎಲೆಯಲ್ಲಿ ರಾಷ್ಟ್ರಗೀತೆಯನ್ನು ನುಡಿಸಿಕೊಂಡು ಬಂದಿದ್ದಾರೆ. ದನ ಕಾಯುವಾಗ ನಡೆಸಿದ ಸತತ ಪ್ರಯತ್ನದಿಂದಾಗಿ ಅಬ್ರಾಹಂಗೆ ಈ ಕಲೆ ಕರಗತವಾಗಿದೆ. ಸ್ವಾತಂತ್ರ್ಯ ದಿನಚರಣೆ ಮತ್ತು ಗಣರಾಜೋತ್ಸವದಂದ ಇವರು ಗಡಿ ಭಾಗದ ಶಾಲೆಗಳಿಗೆ ಭೇಟಿ ನೀಡಿ ಆಲದೆಲೆಯಲ್ಲಿ ರಾಷ್ಟ್ರಗೀತೆ ನುಡಿಸುವ ಮೂಲಕ ದೇಶಾಭಿಮಾನದ ಕಿಚ್ಚನ್ನ ಮಕ್ಕಳಲ್ಲಿ ಮೂಡಿಸುತ್ತಿದ್ದಾರೆ.
ಇದರ ಜೊತೆಗೆ ಹಲಗೆ, ಸನಾಯಿ, ದಮಡಿ, ದಪ್ಪು ಏಕತರಿ, ಎಲೆ ಶ್ರುತಿ, ಲಾವಣಿಗಳು, ತತ್ವ ಪದಗಳು, ಮೊಹರಂ ಹಾಡುಗಳು ಸೇರಿದಂತೆ ಅನೇಕ ಗ್ರಾಮೀಣ ಪ್ರದೇಶದ ಜನಪದ ಕಲೆಗಳನ್ನು ಮೈಗೂಡಿಸಿಕೊಂಡಿದ್ದಾರೆ ಈ ಅಪರೂಪ ಕಲಾವಿದ.
The post ಆಲದ ಎಲೆಯಲ್ಲಿ ರಾಷ್ಟ್ರಗೀತೆ ನುಡಿಸುತ್ತಾರೆ ಬೀದರ್‍ನ ಕಲಾವಿದ! ವಿಡಿಯೋ ನೋಡಿ appeared first on Kannada Public tv.