ಬೆಂಗಳೂರು: ಸಾಧಿಸುವುದಕ್ಕೆ ವಯಸ್ಸಿನ ಮಿತಿ ಇಲ್ಲ ಅನ್ನೂದಕ್ಕೆ ಈ ಪುಟ್ಟ ಪೋರಿಯೇ ಉದಾಹರಣೆ. ಇಲ್ಲಿ ಚಿಕ್ಕವರು ಅನ್ನುವುದಕ್ಕಿಂತ ಸಾಧಿಸುವ ಛಲ, ಹಠ ಇದ್ರೆ ಎಲ್ಲವನ್ನು ಗೆಲ್ಲಬಹುದು ಅನ್ನೋದನ್ನ ಈ ಪೋರಿ ತೋರಿಸಿದ್ದಾಳೆ.
ಜಯನಗರದ ದಿನೇಶ್ ಮತ್ತು ಹೇಮಾಲತಾ ದಂಪತಿಯ ಮಗಳಾದ ಖುಷಿಗೆ ಕೇವಲ 13 ವರ್ಷ ವಯಸ್ಸು, ಅದರೆ ಈಕೆಯ ಸಾಧನೆ ಮಾತ್ರ ದೂಡ್ಡದು. ಮೂರ್ತಿ ಚಿಕ್ಕದಾದ್ರೂ ಕೀರ್ತಿ ದೂಡ್ಡದು ಅನ್ನೋದಕ್ಕೆ ಈ ಪೋರಿಯೇ ಸಾಕ್ಷಿ. ಮೊನ್ನೆ ನಡೆದ ಕರ್ನಾಟಕ ಹಿರಿಯರ ಈಜು ಸ್ಪರ್ಧೆಯಲ್ಲಿ ಈ ಸಣ್ಣ ವಯಸ್ಸಿನಲ್ಲೇ ಭಾಗವಹಿಸಿ ಪ್ರಶಸ್ತಿಯನ್ನು ಬಾಚಿಕೂಂಡಿದ್ದಾಳೆ. ಎರಡು ಚಿನ್ನ ಹಾಗೂ ಎರಡು ಬೆಳ್ಳಿ ಪದಕವನ್ನು ಮುಡುಗೇರಿಸಿಕೂಂಡಿದ್ದಾಳೆ.
ಈ ಪುಟ್ಟ ಪೋರಿ ಸಾಧನೆಯನ್ನು ಗುರುತಿಸಿ, ಈಕೆಯನ್ನ ಜಾರ್ಖಾಂಡ್‍ನಲ್ಲಿ ಮುಂದಿನ ತಿಂಗಳು ನಡೆಯುವ ರಾಷ್ಟೀಯ ಹಿರಿಯರ ಈಜು ಸ್ಪರ್ಧಗೆ ಆಯ್ಕೆ ಮಾಡಲಾಗಿದೆ. 13ನೇ ವಯಸ್ಸಿನಲ್ಲೇ ರಾಷ್ಟೀಯ ಹಿರಿಯರ ಈಜು ಸ್ಪರ್ಧೆಗೆ ಆಯ್ಕೆಯಾಗಿರುವ ಮೊದಲ ಸ್ಪರ್ಧಿ ಈ ಖುಷಿ. ಪ್ರತಿನಿತ್ಯ ಆರು ಗಂಟೆಗಳ ಕಾಲ ಪ್ರಾಕ್ಟೀಸ್ ಮಾಡುವ ಈ ಪೋರಿಯ 10 ವರ್ಷಗಳ ಸತತ ಪರಿಶ್ರಮ ಇದಾಗಿದೆ.
ಈಗಾಗ್ಲೇ ಗ್ರೂಪ್ ನಾಲ್ಕು, ಮೂರು ವಿಭಾಗದಲ್ಲಿ ನಾಲ್ಕು ವರ್ಷಗಳಿಂದ ಚಿನ್ನವನ್ನು ಗೆದ್ದಿರುವ ಖುಷಿ, ಗೋಲ್ಡನ್ ಗರ್ಲ್ ಎಂದು ಬಿರುದು ಪಡೆದಿದ್ದಾಳೆ. ಪೋರಿಯ ಈ ಸಾಧನೆಗೆ ಪೋಷಕರು ಹಾಗೂ ಗುರುಗಳು ಹರ್ಷ ವ್ಯಕ್ತಪಡಿಸ್ತಾರೆ. ಖುಷಿ 2019ರ ಒಲಿಂಪಿಕ್ಸ್ ಗೆಲ್ಲೋ ಕನಸು ಹೂಂದಿದ್ದಾಳೆ.
The post 13ನೇ ವಯಸ್ಸಿನಲ್ಲೇ ರಾಷ್ಟೀಯ ಹಿರಿಯರ ಈಜು ಸ್ಪರ್ಧೆಗೆ ಆಯ್ಕೆಯಾದ ಬಾಲಕಿ appeared first on Kannada Public tv.