Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80435

ಬ್ರೇಕ್ ಫೇಲ್: ಕೆಎಸ್‍ಆರ್‍ಟಿಸಿ ಬಸ್ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿತು ದುರಂತ

$
0
0

ಚಿತ್ರದುರ್ಗ: ಕೆಎಸ್‍ಆರ್‍ಟಿಸಿ ಚಾಲಕನ ಸಮಯ ಪ್ರಜ್ಞೆಯಿಂದ ಚಿತ್ರದುರ್ಗ ಜಿಲ್ಲೆಯ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರ ಕುಂಚಿಗನಾಳ್ ಬಳಿ ದುರಂತ ತಪ್ಪಿದೆ.

ದಾವಣಗೆರೆ ವಿಭಾಗದ ಕೆಎ-17 ಎಫ್ 1373 ಸಂಖ್ಯೆಯ ಬಸ್ ಇದಾಗಿದೆ. ದಾವಣಗೆರೆಯಿಂದ ಬೆಂಗಳೂರಿಗೆ ಹೋಗ್ತಾ ಇದ್ದ ವೈಭವ ಬಸ್ ಏಕಾಏಕಿ ಬ್ರೇಕ್ ಫೇಲಾಗಿದೆ. ಇದನ್ನ ಅರಿತ ಬಸ್ ಚಾಲಕ ಮುಂಜಾಗೃತಾ ದೃಷ್ಟಿಯಿಂದ ಪಕ್ಕದ ಜಮೀನಿಗೆ ಬಸನ್ನ ತಿರುಗಿಸಿದ್ದಾರೆ. . ಬಸ್ಸನ್ನು ಜಮೀನಿಗೆ ನುಗ್ಗಿಸಿ ವೇಗ ನಿಯಂತ್ರಿಸಿದ ಪರಿಣಾಮ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಯಾಣಿಕರು ಪಾರಾಗಿದ್ದಾರೆ.

ctd-passengers

ಗಾಯಗೊಂಡವರನ್ನ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸಿನಲ್ಲಿ 35 ಜನ ಪ್ರಯಾಣಿಕರಿದ್ದರು. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

The post ಬ್ರೇಕ್ ಫೇಲ್: ಕೆಎಸ್‍ಆರ್‍ಟಿಸಿ ಬಸ್ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿತು ದುರಂತ appeared first on Kannada Public tv.


Viewing all articles
Browse latest Browse all 80435


<script src="https://jsc.adskeeper.com/r/s/rssing.com.1596347.js" async> </script>