ಸೇಂಟ್ ಲೂಸಿಯಾ: ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದೆ. ಡರೇನ್ ಸ್ಯಾಮ್ಮಿ ರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 237 ರನ್‍ಗಳ ಗೆಲುವು ಸಾಧಿಸಿದೆ.
ಈ ಮೂಲಕ ಇನ್ನೂ 1 ಪಂದ್ಯ ಬಾಕಿ ಇರುವಾಗಲೇ ಸರಣಿಯನ್ನು 2-0 ಯಿಂದ ವಶಪಡಿಸಿಕೊಂಡಿದೆ. ಇನ್ನು ಕನ್ನಡಿಗ ಅನಿಲ್ ಕುಂಬ್ಳೆ ಮಾರ್ಗದರ್ಶನದ ಮೊದಲ ಸರಣಿಯಲ್ಲೇ ಭಾರತ ಜಯಭೇರಿ ಬಾರಿಸಿದ್ದು ವಿಶೇಷ. ಭಾರತ ನೀಡಿದ್ದ 346 ರನ್‍ಗಳ ಸವಾಲು ಬೆನ್ನು ಹತ್ತಿದ್ದ ವಿಂಡೀಸ್ 47.3 ಓವರ್‍ಗಳಲ್ಲಿ 108 ರನ್ ಕಲೆ ಹಾಕಿ ಸರ್ವತಪತನ ಕಂಡಿತು. ಭಾರತ ಮೊದಲ ಇನಿಂಗ್ಸ್‍ನಲ್ಲಿ 353 ರನ್ ಗಳಿಸಿದ್ರೆ, ವಿಂಡೀಸ್ 225 ರನ್‍ಗೆ ಆಲೌಟ್ ಆಗಿತ್ತು. ಇದ್ರಿಂದ 128 ರನ್ ಮುನ್ನಡೆ ಸಾಧಿಸಿದ್ದ ಭಾರತ, 2ನೇ ಇನಿಂಗ್ಸ್ ನಲ್ಲಿ 7 ವಿಕೆಟ್‍ಗೆ 217 ರನ್‍ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.
ಭಾರತದ ಪರ ಇಶಾಂತ್ ಶರ್ಮ, ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದ್ರೆ, ಆರ್ ಅಶ್ವಿನ್ ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡೆದ್ರು. ಅಂತಿಮ ಟೆಸ್ಟ್ ಆಗಸ್ಟ್ 18ರಂದು ಪೋರ್ಟ್ ಆಫ್ ಸ್ಪೇನ್‍ನಲ್ಲಿ ಆರಂಭವಾಗಲಿದೆ.
The post ಟೆಸ್ಟ್ ಸರಣಿಯಲ್ಲಿ ವಿಂಡೀಸ್ ವಿರುದ್ಧ ಭಾರತಕ್ಕೆ ಐತಿಹಾಸಿಕ ಗೆಲುವು appeared first on Kannada Public tv.