– ಆಪರೇಷನ್ ಚಿತಾಗೆ ನಡೀತಿದೆ ಸಿದ್ಧತೆ
ರಾಮನಗರ: ಆಹಾರ ಹುಡುಕಿಕೊಂಡು ಬಂದ ಚಿರತೆಯೊಂದು ಕುರಿ ಕೊಟ್ಟಿಗೆಗೆ ನುಗ್ಗಿ ಒಂದು ಕುರಿ ತಿಂದು ಕೊಟ್ಟಿಗೆಯಲ್ಲಿಯೇ ಬಂಧಿಯಾಗಿರುವ ಘಟನೆ ರಾಮನಗರ ತಾಲೂಕಿನ ಬಾಳಲಿಂಗೇಗೌಡನ ದೊಡ್ಡಿಯಲ್ಲಿ ನಡೆದಿದೆ.
ತಡರಾತ್ರಿ ಒಂದೂವರೆ ವರ್ಷದ ಚಿರತೆ ಜೋಗಿ ಸಿದ್ದಯ್ಯ ಎಂಬವರ ಮನೆ ಬಳಿಯ ಕುರಿ ಕೊಟ್ಟಿಗೆಗೆ ನುಗ್ಗಿ, ಮೂರು ಕುರಿಗಳಲ್ಲಿ ಒಂದು ಕುರಿಯನ್ನು ತಿಂದಿದೆ. ಗದ್ದಲದಿಂದ ಎಚ್ಚೆತ್ತ ಮನೆಯವರು ಚಿರತೆ ಇರುವುದನ್ನು ಕಂಡು ಕೊಟ್ಟಿಗೆ ಬಂದ್ ಮಾಡಿದ್ದು, ಚಿರತೆ ಮಾವಿನ ಕಾಯಿಯ ಕ್ರೇಟ್‍ಗಳ ಬಳಿ ಅಡಗಿ ಕುಳಿತಿದೆ.
ರಾಮನಗರ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಚಿರತೆಯನ್ನು ಸೆರೆ ಹಿಡಿಯಲು ಮುಂದಾಗಿದ್ದಾರೆ. ಅಲ್ಲದೆ ಚಿರತೆ ಸೆರೆಗೆ ಮಂಡ್ಯ ಜಿಲ್ಲೆ ಮದ್ದೂರಿನಿಂದ ಬೋನು ತರಿಸಿಕೊಳ್ಳುತ್ತಿದ್ದಾರೆ. ಬನ್ನೇರುಘಟ್ಟದಿಂದ ತಜ್ಞರು ಬರುತ್ತಿದ್ದಾರೆ. ಎಲ್ಲಾ ವ್ಯವಸ್ಥೆ ಮಾಡಿಕೊಂಡ ಬಳಿಕ ಚಿರತೆ ಸೆರೆ ಹಿಡಿಯಲು ನಿರ್ಧಾರ ಮಾಡಲಾಗಿದೆ.
The post ರಾಮನಗರ: ಕುರಿ ತಿನ್ನಲು ಬಂದು ಕೊಟ್ಟಿಗೆಯಲ್ಲಿ ಸಿಕ್ಕಿಬಿದ್ದ ಚಿರತೆ! ವಿಡಿಯೋ ನೋಡಿ appeared first on Kannada Public tv.