– ಹಾಕಿ, ಜಿಮ್ನಾಸ್ಟಿಕ್‍ನಲ್ಲಿ ಪದಕದ ಭರವಸೆ
ರಿಯೋ ಡಿ ಜನೈರೊ: ರಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಇಂದು ಮಹತ್ವದ ದಿನವಾಗಿದೆ.
ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ ನಲ್ಲಿ ಭಾರತದ ಬಿಎಸ್ ರೆಡ್ಡಿ ಹಾಗೂ ಎಂ ಅತ್ರಿ ಜಪಾನ್ ವಿರುದ್ಧ ಗೆಲುವು ಸಾಧಿಸಿ ಕ್ವಾಟರ್ ಫೈನಲ್ ಪ್ರವೇಶಿಸಿದ್ದಾರೆ. ಇನ್ನು 36 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪದಕ ಸುತ್ತಿಗೆ ಪ್ರವೇಶಿಸಿರುವ ಪುರುಷರ ಹಾಕಿ ತಂಡ ಇಂದು ಬೆಲ್ಜಿಯಂ ವಿರುದ್ಧ ಸೆಣಸಾಡಲಿದೆ. ರಾತ್ರಿ 9 ಗಂಟೆಗೆ ನಡೆಯುವ ಈ ಪಂದ್ಯದಲ್ಲಿ ಭಾರತ ಗೆದ್ದರೆ ಪದಕ ಗ್ಯಾರಂಟಿ.
ಇದೇ ರಾತ್ರಿ ಜಿಮ್ನಾಸ್ಟಿಕ್‍ನ ವಾಲ್ಟ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ ಭಾರತದ ದೀಪಾ ಕರ್ಮಾಕರ್ ಇಂದು ಚಿನ್ನಕ್ಕಾಗಿ ವಿಶ್ವದ ಘಟಾನುಘಟಿಗಳ ಜೊತೆ ಪೈಪೋಟಿ ನಡೆಸಲಿದ್ದಾರೆ.
ಆದ್ರೆ ಟೆನ್ನಿಸ್ ಮಿಶ್ರ ಡಬಲ್ಸ್ ನಲ್ಲಾದ್ರೂ ಚಿನ್ನ ಬರುತ್ತೆ ಅಂದುಕೊಂಡಿದ್ದ ಭಾರತೀಯರಿಗೆ ನಿರಾಸೆಯಾಗಿದೆ. ನಿನ್ನೆ ರಾತ್ರಿ ನಡೆದ ಪಂದ್ಯದಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಸಾನಿಯಾ ಮಿರ್ಜಾ ಜೋಡಿ ಅಮೆರಿಕಾದ ವಿನಸ್ ವಿಲಿಯಮ್ಸ್, ರಾಜೀವ್ ರಾಮ್ ವಿರುದ್ಧ ಸೋಲನ್ನಪ್ಪಿದೆ. ಆರಂಭದಲ್ಲಿ ಚೆನ್ನಾಗಿಯೇ ಆಡಿದ್ದ ಸಾನಿಯಾ ಜೋಡಿ, 6-2 ಪಾಯಿಂಟ್ಸ್ ನಿಂದ ಮೊದಲ ಸೆಟ್ ಜಯಿಸ್ತು. ಬಳಿಕ 2-6, 3-10 ನೇರ ಸೆಟ್‍ಗಳಲ್ಲಿ ಸೋಲನ್ನಪ್ತು.
ಆದ್ರೆ ಸಾನಿಯಾ ಜೋಡಿ ಇಂದು ನಡೆಯುವ ಪಂದ್ಯದಲ್ಲಿ ಚೆಕ್ ಗಣರಾಜ್ಯ ಜೊತೆ ಕಂಚಿನ ಪದಕಕ್ಕೆ ಪೈಪೋಟಿ ನಡೆಸಲಿದೆ.
The post ರಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಇಂದು ಮಹತ್ವದ ದಿನ appeared first on Kannada Public tv.