ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಗಡಿ ಜಿಲ್ಲೆ ಬೆಳಗಾವಿ ನದಿಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯ ಜಲಪಾತಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.
ಹಾಲಿನಂತೆ ಭೋರ್ಗರೆಯುತ್ತಿರೋ ಸುಂದರ ಜಲಪಾತ. ಹಾಸುಗಲ್ಲಿನ ಮೇಲಿಂದ 180 ಅಡಿಯಷ್ಟು ಎತ್ತರದಿಂದ ಧುಮ್ಮಿಕ್ಕಿ ಬೀಳುತ್ತಿರುವ ಗೋಕಾಕ್ ಜಲಪಾತವನ್ನು ನೋಡುವುದೇ ಸೊಬಗು. ಕರ್ನಾಟಕದ ಎರಡನೇ ಅತಿ ದೊಡ್ಡ ಜಲಪಾತವಾಗಿರುವ ಈ ಜಲಪಾತ ಅಮೇರಿಕಾದ ನಯಾಗರ ಫಾಲ್ಸ್ ಹೋಲುವುದರಿಂದ ಇದನ್ನ ಭಾರತದ ನಯಾಗರ ಫಾಲ್ಸ್ ಎನ್ನಲಾಗುತ್ತೆ. ಅಲ್ಲದೆ ಇಲ್ಲಿಂದ 8 ಕಿಲೋ ಮೀಟರ್ ದೂರದಲ್ಲಿರುವ ಗೋಡಚಿಮಲ್ಕಿ ಜಲಪಾತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಮಾರ್ಕಂಡಯ್ಯ ನದಿಯಿಂದ ಉಂಟಾಗಿರುವ ಜಲಪಾತವನ್ನು ಪ್ರವಾಸಿಗರು ಕಣ್ತುಂಬಿಕೊಳ್ತಿದ್ದಾರೆ.
ರಾಜ್ಯದಲ್ಲಿನ ಮೂಲೆ ಮೂಲೆಗಳಿಂದ ಪ್ರವಾಸಿಗರು ಬೆಳಗಾವಿಯಲ್ಲಿನ ಜಲಪಾತಗಳ ಸೊಬಗನ್ನ ಕಣ್ತುಂಬಿಕೊಂಡು ಖುಷಿಪಡುತ್ತಿದ್ದಾರೆ. ನೀವು ಸಾಧ್ಯವಾದ್ರೆ ಒಮ್ಮೆ ಗೋಕಾಕ್ ಫಾಲ್ಸ್ ಹಾಗೂ ಗೋಡಚಿಮಲ್ಕಿ ಫಾಲ್ಸ್ ಗಳ ಸೌಂದರ್ಯವನ್ನ ಕಣ್ತುಂಬಿಕೊಳ್ಳಿ.
The post ಪ್ರವಾಸಿಗರ ಕೈಬೀಸಿ ಕರೆಯುತ್ತಿದೆ ಗೋಕಾಕ್ ಫಾಲ್ಸ್ appeared first on Kannada Public tv.