ಬೆಂಗಳೂರು: ಬಿಡಿಎನಲ್ಲಿರುವ ಕೆಎಎಸ್ ಅಧಿಕಾರಿ ನಿರಂಜನ್ ಬಾಬು ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಂಡನೊಂದಿಗೆ ಜಗಳ ಮಾಡಿಕೊಂಡು ಮನೆಬಿಟ್ಟು ಪಿಜಿಯಲ್ಲಿ ವಾಸವಿದ್ದ ನಿರಂಜನ್ ಪತ್ನಿ ಚೈತ್ರಾ ನಿನ್ನೆ ಸಂಜಯ್‍ನಗರದ ಪಿಜಿಯಲ್ಲಿ ಕಿಟಕಿಗೆ ವೇಲ್‍ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
21 ವರ್ಷದ ಚೈತ್ರ ಜೊತೆ ಕಳೆದ ವರ್ಷ ನಿರಂಜನ್ ವಿವಾಹವಾಗಿದ್ದರು. ಇದೀಗ ಚೈತ್ರ ಪೋಷಕರು ನಿರಂಜನ್ ಹಾಗೂ ಅವರ ತಾಯಿಯ ಮೇಲೆ ಕಿರುಕುಳದ ಆರೋಪ ಮಾಡಿದ್ದಾರೆ. ಮದುವೆಯಾದ ಒಂದೇ ವರ್ಷಕ್ಕೆ ಚೈತ್ರ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಅನ್ನೋ ಪ್ರಶ್ನೆ ಮೂಡಿದೆ.
The post ಬೆಂಗಳೂರಿನಲ್ಲಿ ಕೆಎಎಸ್ ಅಧಿಕಾರಿಯ ಪತ್ನಿ ಆತ್ಮಹತ್ಯೆ appeared first on Kannada Public tv.