ಬೀಜಿಂಗ್: ಆಮೆ ಮಂದಗತಿಯಲ್ಲಿ ನಡೆಯುವ ಪ್ರಾಣಿ, ಎಷ್ಟೋ ಬಾರೀ ಆಮೆ ರೀತಿ ನಡೀಬೇಡ ಎನ್ನುವುದುಂಟು. ಆದ್ರೆ ಆಮೆಗಳು ಜೋರಾಗಿ ಓಡುತ್ತವೆ ಅನ್ನೋದಕ್ಕೆ ಇಲ್ಲೊಂದು ವಿಡಿಯೋ ಸಾಕ್ಷಿಯಾಗಿದೆ.
ಚೀನಾದ ಮಾಲೀಕರೊಬ್ಬರು ಆಮೆಗಳನ್ನ ಸಾಕಿದ್ದು, ಇವರು ತಟ್ಟೆ ಬಡಿದ ತಕ್ಷಣ ಆಮೆಗಳು ಓಡಿಬರುತ್ತವೆ. ಆಶ್ಚರ್ಯವಾದ್ರೂ ನಿಜ ಮಾಲೀಕ ಕರೆದ ತಕ್ಷಣ ಊಟ ತಿನ್ನಲು ಬರುವ ಸಹಸ್ರಾರು ಆಮೆಗಳು ತಟ್ಟೆ ಮುಂದೆ ನಿಲ್ಲುತ್ತವೆ.
ಮನೆಯ ಗಾರ್ಡನ್ ಹಿಂದಿ ಕೊಳವೊಂದನ್ನ ನಿರ್ಮಿಸಿ, ಆಮೆಗಳಿಗೆ ಹೊಂದುವಂತಹ ಪರಿಸರ ನಿರ್ಮಿಸಿ ಮಾಲೀಕ ಅವುಗಳನ್ನ ಸಾಕುತ್ತಿದ್ದು, ಊಟ ಹಾಕಲು ತಟ್ಟೆ ಬಡಿದರೆ ಸಾಕು ಎಲ್ಲೇ ಇದ್ರೂ ಆಮೆಗಳು ತಟ್ಟೆ ಮುಂಬಾಗಕ್ಕೆ ಬರುತ್ತವೆ.
The post ತಟ್ಟೆ ಬಡಿದ್ರೆ ಸಾಕು ಓಡಿಬರುತ್ತವೆ ಆಮೆಗಳು: ವಿಡಿಯೋ ನೋಡಿ appeared first on Kannada Public tv.