ಬೆಂಗಳೂರು: ಮಾಜಿ ಸಚಿವರು ಮತ್ತು ಅವರ ಪುತ್ರರು ಯಾವ ರೀತಿ ತಮ್ಮ ಇಲಾಖೆಯಲ್ಲಿ ಹಣ ವಸೂಲಿ ಮಾಡುತ್ತಿದ್ರು ಅನ್ನೋದನ್ನ ಪಬ್ಲಿಕ್ ಟಿವಿ ರಹಸ್ಯ ಕ್ಯಾಮರಾದಲ್ಲಿ ಬಯಲು ಮಾಡಿದೆ. ನಾನು ಸಾಚ ಅಂತ ಹೇಳ್ತಾ ಹೇಳ್ತಾ ಪಬ್ಲಿಕ್ ಟಿವಿಗೆ ಬಹಿರಂಗ ಸವಾಲು ಹಾಕಿ ತಮ್ಮ ಊರಿಗೆ ಫಂಥಾಹ್ವಾನ ಕೊಟ್ಟು ನಂತರ ಕಾಣ ಸಿಗದೆ ಓಡಿಹೋಗಿದ್ದ ನಾಯಕರು ನಂತರ ನಾಲಾಯಕ್ ಅಂತ ಮಂತ್ರಿ ಮಂಡಲದಿಂದಾನೇ ಕಿಕ್ ಔಟ್ ಆಗಿದ್ದವರ ಬ್ರಹ್ಮಾಂಡ ಭ್ರಷ್ಟಾಚಾರದ ದರ್ಶನವನ್ನು ಪಬ್ಲಿಕ್ ಟಿವಿ ತೆರೆದಿಟ್ಟಿದೆ.
ಹೌದು. ಇದು ಮಾಜಿ ಸಚಿವ ಪರಮೇಶ್ವರ್ ನಾಯಕ್ ಅವರ ಭ್ರಷ್ಟಾಚಾರದ ರಹಸ್ಯ ಕಾರ್ಯಾಚರಣೆ. ಹೇಗೆ ಮಾಜಿ ಸಚಿವ ಪರಮೇಶ್ವರ್ ತಮ್ಮ ಪುತ್ರನ ಮೂಲಕ ಖಾಸಗಿ ಐಟಿಐ ಕಾಲೇಜುಗಳಿಂದ ಹಣ ವಸೂಲು ಮಾಡ್ತಿದ್ರು ಅನ್ನೋದನ್ನ ಖುದ್ದು ಖಾಸಗಿ ಕಾಲೇಜುಗಳ ಮ್ಯಾನೇಜ್‍ಮೆಂಟ್‍ನವರೇ, ಕಾರ್ಮಿಕ ಇಲಾಖೆಯ ಕಮಿಷನರ್ ಮಂಜುನಾಥ್ ಮುಂದೆ ಬಯಲು ಮಾಡಿದ್ದಾರೆ.
ಇತ್ತೀಚೆಗೆ ನಡೆದ ತುಮಕೂರು ಐಟಿಐ ಕಾಲೇಜುಗಳ ಮೀಟಿಂಗ್‍ನಲ್ಲಿ ಬಂದಿದ್ದ ಎಲ್ಲಾ ಮ್ಯಾನೇಜ್‍ಮೆಂಟ್‍ನವರು ಕಾರ್ಮಿಕ ಇಲಾಖೆಯಲ್ಲಿ ಯಾವ ರೀತಿ ಮಾಜಿ ಸಚಿವರು ಹಸ್ತಕ್ಷೇಪ ಹೇಗಿತ್ತು. ಯಾವ ರೀತಿ ಹಣ ವಸೂಲಿ ಮಾಡ್ತಿದ್ರು ಅಂತ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಅದು ರಹಸ್ಯ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.
ಕಮಿಷನರ್ ಮತ್ತು ಕಾಲೇಜು ಮ್ಯಾನೇಜ್‍ಮೆಂಟ್‍ಗಳ ಜೊತೆ ನಡೆದ ಮಾತುಕತೆ:
ಕಮಿಷನರ್: ದುಡ್ಡು ಕೋಟ್ರೆ ಏನಾದ್ರು ನಡೆದು ಹೋಗ್ಬಿಡುತ್ತಾ ಇಲಾಖೆಯಲ್ಲಿ
ಕಮಿಷನರ್: ನಡೆದು ಹೋಗುತ್ತೇನಪ್ಪಾ ಯಾರವರು.? ಈ ತರ ವ್ಯವಸ್ಥೆ ಹಾಳು ಮಾಡೋರು? ಅಟ್‍ಲೀಸ್ಟ್ ನಾನೊಂದು ಅವನ ಸಸ್ಪೆಂಡ್ ಅಥವಾ ಬೇರೆ ಕಡೆ ತಗಲಾಬೇಕಲ್ವನೇಪ್ಪಾ.
ಮ್ಯಾನೇಜ್‍ಮೆಂಟ್ – ವ್ಯವಸ್ಥೆ ಕೆಟ್ಟು ಹೋಗಿದ್ದೇ ಮಾಜಿ ಸಚಿವರಿಂದ ಸರ್, ಮಿನಿಸ್ಟರ್‍ನಿಂದಾನೆ ಪ್ರಾಬ್ಲಮ್ ಆಗಿದ್ದು. ಅಲ್ಲಿಂದಲೇ ಪ್ರಾರಂಭ ಆಗಿದ್ದು.
ಕಮಿಷನರ್ – ಯಾವ ವರ್ಷದಿಂದ
ಮ್ಯಾನೇಜ್‍ಮೆಂಟ್- ಸರ್ 2012- 13 ನೇ ಇಸ್ವಿಯಿಂದ. ಮಿನಿಸ್ಟರ್ರೇ ಇನ್‍ವಾಲ್ವ್ ಆಗ್ತಾಯಿದ್ರು, ಮಕ್ಕಳು ಎಲ್ಲಾ, ಹಂಗಾಗಿ ಅವರ ಹತ್ರಾನೇ ಕಮಿಟ್‍ಮೆಂಟ್ ಆಗ್ತಾ ಇದ್ವಿ ಸರ್. ಸಾಹೇಬ್ರು ಇವರತ್ರ ಹೇಳ್ಸೋರು ಅಷ್ಟೇ. ಆಫೀಸ್‍ನಾಗೆ ಯಾರು ಶಾಮೀಲು ಆಗ್ತಾ ಇರಲಿಲ್ಲ ಸರ್.
ಕಮಿಷನರ್- ಇಲ್ಲಿ ಇರುತ್ತಿದ್ದ ಕಮಿಷನರ್‍ಗಳಿಗೆ ಇಲ್ಲಿ ಈ ತರ ನಡೀತಿದೆ ಅಂತ ಹೇಳಿದ್ರಾ?
ಮ್ಯಾನೇಜ್‍ಮೆಂಟ್- ನಮಗೆ ಕಮಿಷನರ್ ಇರ್ತಾರೆ ಅಂತ ಗೊತ್ತೇ ಇಲ್ಲ. ನೀವ್ ಬಂದ್ ಮೇಲೇನೆ ಕಮಿಷನರ್ ಇದ್ದಾರೆ ಅಂತ ಗೊತ್ತಾಗಿದ್ದು. ಇದೇ ಫಸ್ಟ್ ಟೈಮ್ ಏನೇ ಹೇಳಿದ್ರು ಅವರೇ ಮಾಡೋರು. ಎಲ್ಲಾ ಕೆಲಸಗಳು ಕೆಳಗಡೆ ಮುಗ್ಸಿಬಿಡೋರು ಸರ್. ಏನ್ ಸರ್ ಇಲ್ಲಿ ಬರ್ತಾಯಿದ್ವಿ ಕಮಿಷನರ್ ನಮಗೆ ಇದಾರೆ ಗೊತ್ತೇ ಆಗಿರಲಿಲ್ಲ ಸರ್.
ಮ್ಯಾನೇಜ್‍ಮೆಂಟ್- ಮೊದಲಿನಿಂದನೂ ಅಲ್ಲಿಂದಲೇ ಸರ್, ಪರಮೇಶ್ವರ್ ನಾಯ್ಕ್ ಅವರಿಂದಾನೇ ಕೆಟ್ಟುಹೋಗಿದ್ದು, ಅಮೇಲೆ ಪರಮೇಶ್ವರ್ ನಾಯ್ಕ ಅವರ ಮಕ್ಕಳೇ ಬರ್ತಾಯಿದ್ರು ಸರ್, ಈ ರೀತಿ ಆಗುತ್ತೆ ಅಂತ ಪ್ರಾಮಿಸ್ ನಮೆಗೆ ಗೊತ್ತಾಗಿದ್ದು ಇದೇ ಫಸ್ಟ್ ಟೈಮ್ ಸರ್. ಆಯುಕ್ತರ ಗಮನಕ್ಕೆ ತಂದಿರುತ್ತೇವೆ ಅಂತ ಲೆಟರ್ ಬಂದಿದ್ದೇ ಇದೇ ಫಸ್ಟ್ ಟೈಮ್ ಸರ್. ಸಾರ್ ನಮಗೆ ಲೆಟರ್ ಬಂದಿದೆಯಲ್ಲಾ ಸರ್ ಆಯುಕ್ತರ ಗಮನಕ್ಕೆ ತಂದಿರುತ್ತೇವೆ ಅಂತ ಲೆಟರ್ ಬಂದಿದ್ದೇ ಇದೇ ಫಸ್ಟ್ ಟೈಮ್ ಯಾವುತ್ತೂ ಆಯುಕ್ತರ ಅಂತ ಹೆಸರು ಬರ್ತಾಯಿರಲಿಲ್ಲ ಸರ್. ಜೆಡಿ ಮತ್ತೆ ಡಿಡಿ ಮತ್ತೆ ಇವ್ರು ಸೈನ್ ಹಾಕೋರು ಸರ್ ಅಷ್ಟೇ. ಅಫಿಲೇಷನ್ ಲೆಟರ್ ಎಲ್ಲದೂ ಆಗಿ ಹೋಗಬಿಡೋದ್ ಸಾರ್.
ಕಮಿಷನರ್- ಆಯ್ತಪ್ಪಾ ಸರಿ ಇಲ್ಲಿ ಯಾರ್ ಹೇಳಿ ನಮ್ಮ ಆಫೀಸ್‍ನಲ್ಲಿ.
ಮ್ಯಾನೇಜ್‍ಮೆಂಟ್- ಸರ್ ಆಫೀಸ್‍ನೋರು ಯಾರು ಸಿಗ್ತಾಯಿರಲಿಲ್ಲ ಸರ್. ನಮಗೆ ಡೈರಕ್ಟಾಗಿ ಮಿನಿಸ್ಟರ್ ಮಗ ಬರೋರು ಸರ್ ಇಲ್ಲೇನೆ ಅಮೌಂಟ್ ಕೋಡ್ರಿ ನಾನ್ ಮಾಡಿಸಿಕೊಡ್ತೀನಿ ಅಂತ ಹೇಳೋರು ನಾವ್ ಅವರಿಗೆ ಕೊಡ್ತಾಯಿದ್ವಿ ಹೋಗ್ತಾಯಿದ್ವಿ ಸರ್ ಅಷ್ಟೇ.
ಈ ವಸೂಲಿ ಕಾರ್ಯದಲ್ಲಿ ಮಿನಿಸ್ಟರ್ ಮಗ ಯಾವ ರೀತಿ ಇನ್‍ವಾಲ್ವ್ ಆಗ್ತಾ ಇದ್ದ ಅನ್ನೋದನ್ನು ಮ್ಯಾನೇಜ್ಮೆಂಟ್‍ನವರು ಕಮಿಷನರ್ ಆಗಿದ್ದ ಮಂಜುನಾಥ್ ಮುಂದೆ ಬಿಚ್ಚಿಟ್ಟಿದ್ದಾರೆ.
ಮಿನಿಸ್ಟರ್ ಪುತ್ರನ ದರ್ಪ:
ಮ್ಯಾನೇಜ್‍ಮೆಂಟ್- ಅವಿನಾಶ್ ಅಂತ ಇದ್ದಾರೆ ಸಾರ್.
ಕಮಿಷನರ್- ಅವರಿಗೂ ಇದಕ್ಕೂ ಏನ್ರೀ ಸಂಬಂಧ
ಮ್ಯಾನೇಜ್‍ಮೆಂಟ್- ಅವರೇ ಬರ್ತಾಯಿದ್ರು, ಅವರನ್ನೇ ಕಳಿಸ್ತಾಯಿದ್ರು ಪರಮೇಶ್ವರ್ ನಾಯ್ಕ ಅವರು. ಇಲ್ಲಿ ಯಾರು ಸಿಗ್ತಾಯಿರಲಿಲ್ಲ ಎಲ್ಲಾ ಮಿನಿಸ್ಟರ್ ಕಡೆಯಿಂದ ಆಗೋದು. ಈ ತರ ಆಗಿ ನಮಗೆ ಹಿಂಗಾಯ್ತು ಸಾರ್. ನೀವು ಬಂದ ಮೇಲೆ ಗೊತ್ತಾಗಿದ್ದು ಈ ತರ ಎಲ್ಲಾ ಚೇಂಜಸ್ ಆಗಿದೆ ಅಂತ. ಅದಕ್ಕೆ ನಾವು ನಿಮ್ ಹತ್ರ ನೇರವಾಗಿ ಬಂದ್ವಿ.
ಕಮಿಷನರ್- ಇಲ್ಲಿ ಅಧಿಕಾರಿಗಳು
ಮ್ಯಾನೇಜ್‍ಮೆಂಟ್- ಇಲ್ಲಿರೋರು ಯಾರು ನಮ್ ಕಾಂಟ್ಯಾಕ್ಟ್‍ನಲ್ಲಿ ಇರಲಿಲ್ಲ ಸರ್.
ಕಾರ್ಮಿಕ ಇಲಾಖೆಯಲ್ಲಿ ಮಾಜಿ ಸಚಿವ ಪರಮೆಶ್ವರ್ ನಾಯಕ್ ಮತ್ತು ಅವರ ಪುತ್ರ ಅವಿನಾಶ್ ಯಾವ ರೀತಿ ಹಣ ವಸೂಲಿ ಮಾಡ್ತಾಯಿದ್ರು ಅನ್ನೋದಕ್ಕೆ ಇದು ಕೇವಲ ಸ್ಯಾಂಪಲ್ ಅಷ್ಟೇ.? ನಿಮಗೆ ವರ್ಗಾವಣೆ ಆಗಬೇಕಾ.? ಪ್ರಮೋಷನ್ ಸಿಗಬೇಕಾ.? ಗುತ್ತಿಗೆ ಹಣ ಸಿಗಬೇಕಾ? ಎಲ್ಲಾದಕ್ಕೂ ಹಣ ಹಣ ಹಣ. ಹಣ ಕೊಟ್ರೆ ಎಲ್ಲವನ್ನು ಮಾಡ್ತಾಯಿದ್ರಂತೆ ಮಾಜಿ ಮಿನಿಸ್ಟರ್ ಪರಮೇಶ್ವರ್ ನಾಯಕ್. ಇವರ ಈ ಹಣದ ದಾಹದಿಂದಾಗಿಯೇ ದಕ್ಷ ಡಿವೈಎಸ್‍ಪಿ ಅನುಪಮಾ ಶಣೈ ರಾಜೀನಾಮೆ ನೀಡಿದ್ದು, ಇಂತಹ ಸಚಿವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿದ್ದಾದ್ರು ಕೂಡ ಸತತ 3 ವರ್ಷಗಳ ಕಾಲ ಇಲಾಖೆಯನ್ನು ಭ್ರಷ್ಟಾಚಾರದಲ್ಲಿ ಮುಳಗಿಸಿದ್ದ ಇವರಿಗೆ ಶಿಕ್ಷೆಯಾಗಬೇಕು ಮಿನಿಸ್ಟರ್ ತಾಳಕ್ಕೆ ತಕ್ಕಂತೆ ಕುಣಿಯೋ ಅಧಿಕಾರಿಗಳಿಗೂ ಶಿಕ್ಷೆಯಾಗಬೇಕು.
ಆದ್ರೆ ಈಗ ಕಮಿಷನರ್ ಮಂಜುನಾಥ್ ವರ್ಗಾವಣೆಯಾಗಿದೆ. ಮುಖ್ಯಮಂತ್ರಿಗಳು ಮತ್ತು ನೂತನ ಸಚಿವ ಸಂತೋಷ್ ಲಾಡ್ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ತಾರ ಅನ್ನೋದನ್ನ ಕಾದು ನೋಡಬೇಕಿದೆ.
The post ಐಟಿಐ ಕಾಲೇಜುಗಳಿಂದ ವಸೂಲಿ: ಬಯಲಾಯ್ತು ಪರಮೇಶ್ವರ್ ನಾಯ್ಕ್ ದಂಧೆ appeared first on Kannada Public tv.