Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80042

2 ಗಂಟೆಯಲ್ಲಿ 20 ಜನರ ಮೇಲೆ ದಾಳಿ ಮಾಡ್ತು ನಾಯಿ! ವಿಡಿಯೋ ನೋಡಿ

$
0
0

ಬೀಜಿಂಗ್: ಬೀದಿ ನಾಯಿಯೊಂದು 8 ವರ್ಷದ ಬಾಲಕ ಹಾಗೂ 70 ವರ್ಷದ ವೃದ್ಧನನ್ನೂ ಸೇರಿದಂತೆ ಸುಮಾರು 20 ಜನರ ಮೇಲೆ ದಾಳಿ ಮಾಡಿರುವ ಘಟನೆ ಚೀನಾದಲ್ಲಿ ನಡೆದಿದೆ.

ಇಲ್ಲಿನ ಗಿಝಾವ್ ಪ್ರಾಂತ್ಯದಲ್ಲಿ ನಾಯಿ ರಸ್ತೆಯಲ್ಲಿ ಅನೇಕ ಜನರ ಮೇಲೆ ದಾಳಿ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುಮ್ಮನೆ ನಿಂತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿ ಆತನ ಕಾಲನ್ನು ಕಚ್ಚಿದೆ. ನಾಯಿಯಿಂದ ಪಾರಾಗಲು ಎಷ್ಟೇ ಮೈಕೊಡವಿದ್ರೂ ಅದು ಆತನನ್ನ ಬಿಡದಿದ್ದಾಗ ಕೈಯಲ್ಲಿದ್ದ ಟೋಪಿಯಿಂದ ಹೊಡೆದು ಬಚಾವಾಗಿದ್ದಾನೆ. ಮತ್ತೊಬ್ಬ ಮಹಿಳೆಯ ಮೇಲೆ ನಾಯಿ ದಾಳಿ ಮಾಡಿದಾಗ ಆಕೆ ತನ್ನ ಬ್ಯಾಗ್‍ನಿಂದ ಹೊಡೆದು ಪಾರಾಗಿದ್ದಾಳೆ.

ಹೀಗೆ ಆ ರಸ್ತೆಯಲ್ಲಿ ಒಡಾಡಿದ ಸುಮಾರು 20 ಜನರ ಮೇಲೆ ಈ ನಾಯಿ ದಾಳಿ ಮಾಡಿದ್ದು, 2 ಗಂಟೆಗಳ ನಂತರ ಪೊಲೀಸರು ಸ್ಥಳಕ್ಕಾಗಮಿಸಿ ಬೇರೆ ವಿಧಿಯಿಲ್ಲದೆ ನಾಯಿಯನ್ನು ಗುಂಡಿಟ್ಟು ಕೊಂದಿದ್ದಾರೆ.

The post 2 ಗಂಟೆಯಲ್ಲಿ 20 ಜನರ ಮೇಲೆ ದಾಳಿ ಮಾಡ್ತು ನಾಯಿ! ವಿಡಿಯೋ ನೋಡಿ appeared first on Kannada Public tv.


Viewing all articles
Browse latest Browse all 80042


<script src="https://jsc.adskeeper.com/r/s/rssing.com.1596347.js" async> </script>