Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80052

ಚೀನಾದ ಎಲಿವೇಟೆಡ್ ಬಸ್ ಭಾರತಕ್ಕೆ ಬರುತ್ತಾ? ಮೋದಿ ಅಧಿಕಾರಿಗಳಿಗೆ ಹೇಳಿದ್ದೇನು?

$
0
0

ನವದೆಹಲಿ: ಚೀನಾದ ಎಲಿವೇಟೆಡ್ ಬಸ್ ಈಗ ಪ್ರಧಾನಿ ನರೇಂದ್ರ ಮೋದಿ ಅವರ ಕಣ್ಣಿಗೆ ಬಿದ್ದಿದೆ. ಎಲಿವೇಟೆಡ್ ಬಸ್ ಮೋದಿಯವರ ಗಮನ ಸೆಳೆದಿದ್ದು, ಈ ಬಸನ್ನು ಭಾರತದಲ್ಲೂ ಓಡಿಸಲು ಸಾಧ್ಯವೇ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆ ಸಲಹೆ ಕೇಳಿದ್ದಾರೆ.

ಕಳೆದವಾರ ಬಸ್ ತನ್ನ ಪರೀಕ್ಷಾರ್ಥ ಪ್ರಯೋಗ ಮಾಡಿದ ಹಿನ್ನೆಲೆಯಲ್ಲಿ ಮೋದಿಯವರು ಹಿರಿಯ ಅಧಿಕಾರಿಗಳ ಸಭೆಯುಲ್ಲಿ ಈ ಬಸ್‍ನ ಬಗ್ಗೆ ಚರ್ಚಿಸಿದ್ದಾರೆ. ಈ ಬಸ್‍ನ ಬಗ್ಗೆ ಎಲ್ಲ ಮಾಹಿತಿ ಕಲೆ ಹಾಕಿ ವರದಿ ನೀಡಿ ಎಂದು ಅಧಿಕಾರಿಗಳಿಗೆ ಮೋದಿ ಸೂಚಿಸಿದ್ದಾರೆ.

ಎಷ್ಟೇ ಟ್ರಾಫಿಕ್ ಇದ್ದರೂ ಸರಗವಾಗಿ ಸಂಚರಿಸುವ ಬಸ್ಸನ್ನು ಟ್ರಾನ್ಸಿಸ್ಟ್ ಎಕ್ಸ್ ಪ್ಲೋರ್  ಕಂಪೆನಿ ತಯಾರಿಸಿದ್ದು ಕಳೆದ ವಾರ ಟೆಸ್ಟ್ ಡ್ರೈವ್ ನಡೆಸಿತ್ತು. ಈ ಬಸ್ ಒಂದು ಸಲಕ್ಕೆ ಸುಮಾರು 300 ರಿಂದ 1200 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ಬಸ್ ಸಂಚಾರ ಹೇಗೆ?
ರಸ್ತೆಯ ಎರಡು ಬದಿಗಳಲ್ಲಿ ವಿದ್ಯುತ್ ಹಳಿ ನಿರ್ಮಿಸಿ ಎರಡು ಮೀಟರ್ ಎತ್ತರದಲ್ಲಿ ಬಸ್‍ನ್ನು ಸೇತುವೆ ಮಾದರಿಯಲ್ಲಿ ನಿಲ್ಲಿಸಲಾಗುತ್ತದೆ. ಈ ವೇಳೆ ಕಾರು, ಬೈಕ್‍ಗಳು ಕೆಳ ಭಾಗದಲ್ಲಿ ಸಂಚರಿಸುವುದರಿಂದ ಬಸ್‍ಗೆ ಯಾವುದೇ ತೊಂದರೆ ಆಗುವುದಿಲ್ಲ. 2010ರಲ್ಲೇ ಸಬ್ ಬಸ್ ನಿರ್ಮಾಣದ ಯೋಜನೆ ಸಿದ್ಧಗೊಂಡಿದ್ದರೂ ಕಾರಣಾಂತರಗಳಿಂದ ಮುಂದಕ್ಕೆ ಹೋಗಿ 6 ವರ್ಷಗಳ ಬಳಿಕ ಇದು ಸಾಕಾರಗೊಂಡಿದೆ. 1200 ಮಂದಿ ಕುಳಿತುಕೊಳ್ಳಬಹುದಾದ ಸಾಮರ್ಥ್ಯ ಇರುವ ಬಸ್ ಗಂಟೆಗೆ 60 ಕಿ.ಮೀ ವೇಗದಲ್ಲಿ ಸಂಚರಿಸುತ್ತದೆ ಎಂದು ಎಂಜಿನಿಯರ್‍ಗಳು ಹೇಳಿದ್ದಾರೆ.

The post ಚೀನಾದ ಎಲಿವೇಟೆಡ್ ಬಸ್ ಭಾರತಕ್ಕೆ ಬರುತ್ತಾ? ಮೋದಿ ಅಧಿಕಾರಿಗಳಿಗೆ ಹೇಳಿದ್ದೇನು? appeared first on Kannada Public tv.


Viewing all articles
Browse latest Browse all 80052