ಬೆಂಗಳೂರು: ತಾಂಜಾನಿಯಾ ಯುವತಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪೊಲೀಸ್ ಅಧಿಕಾರಿಯ ತಲೆದಂಡವಾಗಿದೆ. ನಗರ ಪೊಲೀಸ್ ಆಯುಕ್ತ ಮೇಘರಿಕ್ ಅವರು ಯಶವಂತಪುರ ವಿಭಾಗದ ಎಸಿಪಿ ಅಶ್ವಥ್ ನಾರಾಯಣ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಅಶ್ವಥ್ ನಾರಾಯಣ್ ಸೇರಿ ಈ ಪ್ರಕರಣಕ್ಕೆ ಒಟ್ಟು ನಾಲ್ಕು ಮಂದಿಯ ತಲೆದಂಡವಾಗಿದೆ. ನಿನ್ನೆ ಸೋಲದೇವನಹಳ್ಳಿ ಠಾಣೆಯ ಇನ್ಸ್ ಪೆಕ್ಟರ್ ಪ್ರವೀಣ್ ಬಾಬು, ಪೇದೆ ರಾಜಶೇಖರ್ ಮತ್ತು ಪೀಣ್ಯ ಪೇದೆ ಮಂಜುನಾಥ್ ಅವರನ್ನು ಅಮಾನತುಗೊಂಡಿದ್ದರು.
ಸಸ್ಪೆಂಡ್‍ಗೆ ಆಗಿದ್ದು ಯಾಕೆ?
* ಅಪಘಾತ ಮಾಡಿದ ಸುಡಾನ್‍ನ ಜಮಾಲ್, ದೂರು ನೀಡುವಾಗ ಯುವತಿ ಜೊತೆಯಲ್ಲಿದ್ದ ಮಾಹಿತಿ ನೀಡಿದ್ದ
* ಯುವತಿಯ ಮಾಹಿತಿ ನೀಡಿದರೂ, ಯುವತಿಯ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸದೇ ಇರುವುದು ತಪ್ಪು.
* ಚೀತಾ ಪಿಸಿ ತಕ್ಷಣ ಕ್ರಮ ಕೈಗೊಳ್ಳಲಿಲ್ಲ ಎಂಬ ಮಾಹಿತಿ
* ಘಟನಾ ಸ್ಥಳದಿಂದ ಇಬ್ಬರು ಯುವಕರನ್ನು ಪಾರು ಮಾಡಿದ ಪೊಲೀಸರು, ಯುವತಿಯನ್ನ ಅಲ್ಲೇ ಬಿಟ್ಟಿದ್ದು ತಪ್ಪು.