ಮೇರಿಲ್ಯಾಂಡ್: ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ ಹಲವು ಕಾರ್‍ಗಳು ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ವೇಳೆ ಸ್ಥಳೀಯರು ಕಾರ್‍ವೊಂದರಲ್ಲಿದ್ದ ಮಹಿಳೆಯನ್ನ ಸಿನಿಮೀಯ ರೀತಿಯಲ್ಲಿ ರಕ್ಷಿಸಿರುವ ಘಟನೆ ಅಮೆರಿಕದ ಮೇರಿಲ್ಯಾಂಡ್‍ನ ಎಲಿಕಾಟ್ ಸಿಟಿಯಲ್ಲಿ ನಡೆದಿದೆ.
ಎಲಿಕಾಟ್ ಸಿಟಿಯಲ್ಲಿ ಆರ್ಟ್ ಗ್ಯಾಲರಿ ಮತ್ತು ಫ್ರೇಮಿಂಗ್ ಅಂಗಡಿ ಹೊಂದಿರೋ ಸಾರಾ ಈ ಘಟನೆಯ ವಿಡಿಯೋವನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಳೆದ ಶನಿವಾರ ರಾತ್ರಿ ಭಾರೀ ಮಳೆಯಿಂದ ನಗರದ ರಸ್ತೆಯ ಇಕ್ಕೆಲಗಳಲ್ಲಿ ನೀರು ತುಂಬಿ ಹರಿಯುತ್ತಿತ್ತು. ಕೆಲವರು ಮಳೆ ನಿಲ್ಲಲಿ ಅಂತ ಸಾರಾ ಅವರ ಅಂಗಡಿ ಮುಂದೆ ನಿಂತಿದ್ರು. ಈ ವೇಳೆ ನೀರಲ್ಲಿ ಕೊಚ್ಚಿಕೊಂಡು ಹೋಗ್ತಿದ್ದ ಕಾರ್‍ನಲ್ಲಿ ಮಹಿಳೆಯೊಬ್ಬರು ಇರುವುದನ್ನು ಗಮನಿಸಿದ್ದರು. ಆಕೆಯನ್ನ ಕಾಪಾಡಲು ಹೋದ ವ್ಯಕ್ತಿಯೊಬ್ಬರು ತಾವೂ ಕೂಡ ಹರಿಯುತ್ತಿದ್ದ ನೀರಲ್ಲಿ ಸ್ವಲ್ಪ ದೂರ ಕೊಚ್ಚಿ ಹೋಗಿದ್ರು. ನಂತರ ಹೇಗೋ ನೀರಿನಿಂದ ಎದ್ದು ಬಂದು ಅಲ್ಲಿದ್ದವರೊಂದಿಗೆ ಮಾನವ ಸರಪಳಿ ನಿರ್ಮಿಸಿ ಕಾರಿನ ಕಿಟಕಿಯ ಮುಖಾಂತರ ಮಹಿಳೆಯನ್ನ ಹೊರಬರುವಂತೆ ಮಾಡಿ ಆಕೆಯನ್ನ ರಕ್ಷಿಸಿದ್ದಾರೆ. ಈ ನಗರದಲ್ಲಿ ಮಳೆಯ ಕಾರಣ ಇಬ್ಬರು ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.
The post ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದ್ದ ಕಾರ್‍ನಿಂದ ಮಹಿಳೆಯನ್ನ ರಕ್ಷಿಸಿದ್ರು! ವಿಡಿಯೋ ನೋಡಿ appeared first on Kannada Public tv.