ಸಿಡ್ನಿ: ಐಫೋನ್- 6 ಸ್ಫೋಟಗೊಂಡ ಪರಿಣಾಮ ವ್ಯಕ್ತಿಯೊಬ್ಬರು ಸುಟ್ಟ ಗಾಯಗಳಿಂದ ಆಸ್ಪತ್ರೆ ಸೇರಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.
ಸಿಡ್ನಿಯ ಕಂಪನಿಯೊಂದರಲ್ಲಿ ಮ್ಯಾನೇಜ್‍ಮೆಂಟ್ ಕನ್ಸ್‍ಲ್ಟೆಂಟ್ ಆಗಿರುವ ಗ್ಯಾರೆತ್ ಕ್ಲಿಯರ್ ಅವರ ಆಪಲ್ ಐಫೋನ್ ಸ್ಫೋಟಗೊಂಡಿದ್ದು, ತೊಡೆಯ ಭಾಗದಲ್ಲಿ ಸುಟ್ಟ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಹೇಗಾಯ್ತು: ಗ್ಯಾರೆತ್ ಪ್ಯಾಂಟ್‍ನ ಹಿಂಬದಿಯ ಜೇಬಿನಲ್ಲಿ ಐಫೋನ್ ಇಟ್ಟುಕೊಂಡಿದ್ರು. ಬೈಕ್‍ನಿಂದ ಕೆಳಗೆ ಬಿದ್ದಿದ್ದರಿಂದ ಜೇಬಿನಲ್ಲಿದ್ದ ಐಫೋನ್ ಮೇಲೆಯೇ ಬಿದ್ದಿದ್ದರು. ಇದರಿಂದಾಗಿ ಜೇಬಿನಿಂದ ಹೊಗೆ ಬರುವುದನ್ನು ಗಮನಿಸಿ ಗಾಬರಿಯಾಗಿದ್ರು. ಇದಾದ ಕೆಲವೇ ಸೆಕೆಂಡ್‍ನಲ್ಲಿ ಐಫೋನ್ ಸ್ಫೋಟಗೊಂಡಿದೆ. 6 ತಿಂಗಳ ಹಿಂದಷ್ಟೇ ಖರೀದಿಸಿದ್ದ ಫೋನ್ ಬಿಸಿಯಿಂದ ಕರಗಿ ಗ್ಯಾರೆತ್ ಅವರ ಪ್ಯಾಂಟ್ ಸುಟ್ಟು, ಚರ್ಮದ ಎರಡು ಪದರವೂ ಸುಟ್ಟುಹೋಗಿತ್ತು. ಗ್ಯಾರೆತ್ ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗಾಯಗೊಂಡಿರುವುದನ್ನು ಫೋಟೋ ತೆಗೆದು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ.
ಫೋನಿನ ಹಿಂಭಾಗ ಸಂಪೂರ್ಣವಾಗಿ ಸುಟ್ಟುಹೋಗಿ ಮೆಟಲ್ ಬೆಂಡಾಗಿ ಲಿಥಿಯಮ್ ಸೋರುತ್ತಿತ್ತು. ಆದರೆ ಫೋನಿನ ಮೇಲ್ಭಾಗಕ್ಕೆ ಮಾತ್ರ ಏನೂ ಆಗಿರಲಿಲ್ಲ ಅಂತ ಗ್ಯಾರೆತ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ತನಿಖೆ ನಡೆಸುವುದಾಗಿ ಆಪಲ್ ಸಂಸ್ಥೆ ಗ್ಯಾರೆತ್‍ಗೆ ತಿಳಿಸಿದೆ ಎಂದು ವರದಿಯಾಗಿದೆ.
Still in pain pic.twitter.com/WSDxmUKNN0
— Gareth Clear (@gareth_clear) August 2, 2016
The post ಐಫೋನ್-6 ಸ್ಫೋಟಗೊಂಡು ವ್ಯಕ್ತಿಗೆ ಗಾಯ appeared first on Kannada Public tv.