ನವದೆಹಲಿ: ನೀವು ಕರ್ನಾಟಕದವರೇ? 251 ರೂಪಾಯಿಯ ಫ್ರೀಡಂ 251 ಮೊಬೈಲ್ ಫೋನ್ ಬುಕ್ ಮಾಡಿದ್ದೀರಾ? ಹಾಗಾದ್ರೆ ನಿಮಗೆ ಈ ಬಾರಿ ಆರಂಭದಲ್ಲೇ ಫೋನ್ ಬರೋದು ಡೌಟ್.
ನೊಯ್ಡ ಮೂಲದ ರಿಂಗಿಂಗ್ ಬೆಲ್ಸ್ ಕಂಪೆನಿ ಆರಂಭಿಕ ಹಂತದಲ್ಲಿ 65 ಸಾವಿರ ಫೋನ್‍ಗಳನ್ನು, ದೇಶದ 13 ರಾಜ್ಯಗಳ ಗ್ರಾಹಕರಿಗೆ ಮಾರಾಟ ಮಾಡಲು ಮುಂದಾಗಿದೆ.
ಕ್ಯಾಶ್ ಆನ್ ಡೆಲಿವರಿ(ಸಿಓಡಿ)ಯಾಗಿ ಫೋನನ್ನು ಗ್ರಾಹಕರಿಗೆ ತಲುಪಿಸಲಿದ್ದು ಮೊದಲ ಹಂತದಲ್ಲಿ ಪಶ್ಚಿಮ ಬಂಗಾಳ, ಹರ್ಯಾಣ, ಹಿಮಾಚಲ ಪ್ರದೇಶ, ಬಿಹಾರ, ಉತ್ತರಾಖಂಡ್, ನವದೆಹಲಿ, ಪಂಜಾಬ್, ಜಮ್ಮು ಕಾಶ್ಮೀರ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಜಾರ್ಖಂಡ್, ರಾಜಸ್ಥಾನ, ಉತ್ತರ ಪ್ರದೇಶದ ಗ್ರಾಹಕರಿಗೆ ಈ ಫೋನ್ ವಿತರಣೆಯಾಗಲಿದೆ.
ಈ ಸಂಬಂಧ ಕಂಪೆನಿ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದು,’ಕೆಲ ದಿನಗಳಿಂದ ನಾವು ವಿತರಣೆ ಕಾರ್ಯವನ್ನು ಆರಂಭಿಸಿದೆ. ಲಾಟರಿ ಎತ್ತುವ ಮೂಲಕ ಗ್ರಾಹಕರನ್ನು ಆಯ್ಕೆ ಮಾಡಿಕೊಂಡು ಫೋನ್ ವಿತರಣೆ ಮಾಡುತ್ತೇವೆ’ ಎಂದು ತಿಳಿಸಿದೆ.
ಈ ಹಿಂದೆ ಸಂಸ್ಥೆಯ ಸಿಇಒ ಮೋಹಿತ್ ಗೋಯಲ್ ಹತ್ತಿರ ಹತ್ತಿರ 2 ಲಕ್ಷ ರಿಂಗಿಗ್ ಬೆಲ್ ಫೋನ್ ಮಾರಾಟಕ್ಕೆ ಸಿದ್ದವಾಗಿದ್ದು ಜೂನ್ 30ರಿಂದ ವಿತರಣೆ ಮಾಡುತ್ತೇವೆ ಎಂದು ತಿಳಿಸಿದ್ದರು.
ರಿಂಗಿಂಗ್ ಬೆಲ್ ಗುಣವೈಶಿಷ್ಟ್ಯ
ಡ್ಯುಯಲ್ ಸಿಮ್
ಆಂಡ್ರಾಯ್ಡ್ ಲಾಲಿಪಾಪ್ ಓಎಸ್
4 ಇಂಚಿನ ಐಪಿಎಸ್ ಸ್ಕ್ರೀನ್(960*540 ಪಿಕ್ಸೆಲ್)
1.3GHz ಕ್ವಾಡ್ ಕೋರ್ ಪ್ರೊಸೆಸರ್
3.2 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
8ಜಿಬಿ ಆಂತರಿಕ ಮೆಮೊರಿ
1 ಜಿಬಿ ರಾಮ್
32 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮಥ್ರ್ಯ
1450 ಎಂಎಎಚ್ ಬ್ಯಾಟರಿ
The post ಕನ್ನಡಿಗರಿಗೆ ಆರಂಭದಲ್ಲೇ ಫ್ರೀಡಂ 251 ಫೋನ್ ಬರೋದು ಡೌಟ್! appeared first on Kannada Public tv.