– ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಬಿಎಸ್‍ವೈ ಗೈರು
ಬೆಂಗಳೂರು: ಜಿ.ಪಂ, ತಾ.ಪಂ.ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗಿದೆ. ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಪ್ರಣಾಳಿಕೆ ಬಿಡುಗಡೆ ಮಾಡಿದರು.
ಸ್ವಾವಲಂಬಿ – ಸಮೃದ್ಧ ಗ್ರಾಮ ನಿರ್ಮಾಣದ ಕನಸು, ಬಿಜೆಪಿಯಿಂದ ನನಸು ಬಿಜೆಪಿ ಪ್ರಣಾಳಿಕೆಯ ಘೋಷಣೆಯಾಗಿದ್ದು, ಪಂಚಾಯಿತಿ ಆಡಳಿತಕ್ಕೆ ಬಿಜೆಪಿ ಸಪ್ತಸೂತ್ರವನ್ನು ಪ್ರಣಾಳಿಕೆಯಲ್ಲಿ ಅಳವಡಿಸಲಾಗಿದೆ.
ಕಾಂಗ್ರೆಸ್ ಪಾಪಿ ಪಕ್ಷ: ರೈತರಿಗೆ ಮೋಸ ಮಾಡಿದ ಪಾಪಿ ಪಕ್ಷ ಕಾಂಗ್ರೆಸ್. ಬೆಳೆ ವಿಮೆಯಲ್ಲಿ ರೈತರಿಗೆ ಮೋಸ ಆಗ್ತಿದೆ, ರೈತರು ಪ್ರಿಮಿಯಮ್ ಕಟ್ತಾರೆ, ಆದ್ರೆ ವಿಮೆ ಹಣ ರೈತರಿಗೆ ಸಿಕ್ತಿಲ್ಲ ಅಲ್ಲದೆ ರಾಜ್ಯ ಸರ್ಕಾರಕ್ಕೆ ಮೋದಿ ಆಶಯದ ಟೀಂ ಇಂಡಿಯಾ ಸಹಕಾರ ನೀಡಿದ್ದೇವೆ. ಇನ್ವೆಸ್ಟ್ ಕರ್ನಾಟಕಕ್ಕೆ ಕೇಂದ್ರದ ಸಚಿವರು ಭಾಗವಹಿಸಿದ್ರು, ಆದ್ರೆ ಬಿಜೆಪಿ ಸರ್ಕಾರ ಇದ್ದಾಗ ಕೇಂದ್ರ ಸಚಿವರು ಯಾರು ಬರಲಿಲ್ಲ ಎಂದು ಟೀಕಿಸಿದರು.
ಇದೇ ವೇಳೆ ಸಿಎಂ ಮಾಧ್ಯಮ ಸಲಹೆಗಾರರು ಪರೋಕ್ಷವಾಗಿ ಭಯೋತ್ಪಾದಕರನ್ನು ಬೆಂಬಲಿಸುತ್ತಿದ್ದಾರೆ, ಅವರ ಮೇಲೆ ಕೇಸ್ ಹಾಕಿ ಬಂಧಿಸಬೇಕು, ಯಾವ ಪುಣ್ಯಾತ್ಮ ಅವ್ರನ್ನ ಮಾಧ್ಯಮ ಸಲಹೆಗಾರರನ್ನಾಗಿ ಮಾಡಿದ್ರೋ.? ಅಂತಾ ವ್ಯಂಗವಾಡಿದ್ರು.
ಕೇಂದ್ರ ಸಚಿವ ಅನಂತ್ ಕುಮಾರ್, ಸದಾನಂದಗೌಡ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಆರ್.ಅಶೋಕ್, ಪ್ರಣಾಳಿಕೆ ಸಮಿತಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವ ಸುರೇಶ್ ಕುಮಾರ್ ಉಪಸ್ಥಿತರಿದ್ರು. ಆದ್ರೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಿಂದ ಯಡಿಯೂರಪ್ಪ ದೂರ ಉಳಿದಿದ್ದರು. ಕೊನೆಗಳಿಗೆಯಲ್ಲಿ ಮಾಹಿತಿ ಕೊಟ್ಟಿದ್ದರಿಂದ ಪ್ರಣಾಳಿಕೆ ಬಿಡುಗಡೆಗೆ ಬಿಎಸ್‍ವೈ ಗೈರಾಗಿದ್ದರು ಎನ್ನಲಾಗಿದೆ. ಇವತ್ತು ಹಾವೇರಿಯ ಹಿರೇಕೆರೂರ್ ನಲ್ಲಿ ಯಡಿಯೂರಪ್ಪ ಪ್ರಚಾರ ನಡೆಸಿದರು.
> ಸಪ್ತಸೂತ್ರಗಳು
* ಆಡಳಿತಾತ್ಮಕ ಶಕ್ತಿ ವೃದ್ಧಿ
* ಸಾಮರ್ಥ್ಯ ವೃದ್ಧಿ
* ಸಂಪನ್ಮೂಲ ಕ್ರೋಢಿಕರಣ
* ಪಂಚಾಯತ್ ರಾಜ್ ಸ್ವಾಯತ್ತತೆಗೆ ಆದ್ಯತೆ
* ಅಭಿವೃದ್ಧಿ ಕೇಂದ್ರಿತ ಆಡಳಿತ
* ಸಾಮಾಜಿಕ ವಿಕಾಸವೇ ಮೂಲಮಂತ್ರ
* ಅಂತ್ಯದೋಯಕ್ಕಾಗಿಯೇ ಕಾರ್ಯಕ್ರಮ
ಪ್ರಣಾಳಿಕೆ ಪ್ರಮುಖಾಂಶಗಳು
* ತಾಪಂ ಗೆ ಕನಿಷ್ಠ 5ಕೋಟಿ, ಜಿಪಂ ಗೆ ಕನಿಷ್ಠ 10ಕೋಟಿ ವಾರ್ಷಿಕ ವಿಶೇಷ ಅನುದಾನಕ್ಕೆ ಹೋರಾಟ
* ತಾಪಂ ಮಟ್ಟದಲ್ಲಿ ಯೋಜನಾ ಮಂಡಳಿಗಳ ರಚನೆ
* ಜಿಲ್ಲಾ, ತಾಲ್ಲೂಕು ಆಡಳಿತ, ಕಾಮಗಾರಿಗಳ ಪರಿಶೀಲನೆಗೆ ಜಾಗೃತ ಸಮಿತಿಗಳ ರಚನೆ
* ಎಲ್ಲಾ ಪಂಚಾಯ್ತಿಗಳಲ್ಲಿ ಸಂಪೂರ್ಣ ಗಣಕೀಕರಣ
* ಪಂಚಾಯತ್ ರಾಜ್ ಕೆಲಸಗಳಿಗೆ ಡಿಜಿಟಲ್ ಇಂಡಿಯಾ ಟಚ್
* ಕೃಷಿ ಪಂಪ್ ಸೆಟ್ ಗಳಿಗೆ ಸೌರಶಕ್ತಿ ಅಳವಡಿಕೆಗೆ ಪ್ರೋತ್ಸಾಹ
* ಎಲ್ಲಾ ತಾಲ್ಲೂಕುಗಳಲ್ಲಿ ಮಹಿಳೆಯರಿಗಾಗಿ ಉದ್ಯೋಗ ತರಬೇತಿ ಕೇಂದ್ರ ಸ್ಥಾಪನೆ
* ಗ್ರಾಮಗಳನ್ನ ವ್ಯಸನಮುಕ್ತ, ವ್ಯಾಜ್ಯಮುಕ್ತ , ಆರೋಗ್ಯಯುಕ್ತ ಮಾಡುವ ಯೋಜನೆ
* ಪ್ರತಿ ಜಿಲ್ಲೆಯಯಲ್ಲಿ ಜೀವ ವೈವಿಧ್ಯ ಉದ್ಯಾನ
* ದೇಶಿಯ ಹಸು ಸಾಕಾಣಿಕೆಗೆ ಪ್ರೋತ್ಸಾಹ
* ಗ್ರಾಮೀಣ ಬೀದಿ ದೀಪಗಳಿಗೆ ಸೋಲಾರ್, ಎಲ್‍ಇಡಿಬಲ್ಬ್ ಗಳ ಅಳವಡಿಕೆ
* ಗ್ರಾಮೀಣ ದೇವಾಲಯಗಳ ಅಭಿವೃದ್ಧಿ