ನವದೆಹಲಿ: ಮಹತ್ಮಾ ಗಾಂಧಿ ಹತ್ಯೆ ವಿಚಾರದಲ್ಲಿ ಆರ್‍ಎಸ್‍ಎಸ್‍ಗೆ ಅವಮಾನಿಸಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ರಾಹುಲ್ ಗಾಂಧಿ ಕಾಂಗ್ರೆಸ್ ಪ್ರಚಾರದ ವೇಳೆ ಮಹಾತ್ಮಾಗಾಂಧಿ ಹತ್ಯೆ ಹಿಂದೆ ಆರ್‍ಎಸ್‍ಎಸ್ ಕೈವಾಡ ಇದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ರಾಹುಲ್ ಈ ಹೇಳಿಕೆಯನ್ನು ಪ್ರಶ್ನಿಸಿ ಆರ್‍ಎಸ್‍ಎಸ್ ಮಾನನಷ್ಟ ಮೊಕದ್ದಮೆ ಹಾಕಿತ್ತು.
ಈ ಅರ್ಜಿಯ ವಿಚಾರಣೆ ವೇಳೆ ಆರ್‍ಎಸ್‍ಎಸ್ ಬಗ್ಗೆ ಬೇಜಾವಾಬ್ದಾರಿ ಹೇಳಿಕೆ ನೀಡಿದ್ದೇಕೆ ಎಂದು ಪ್ರಶ್ನಿಸಿದ ಕೋರ್ಟ್ ಒಂದು ಸಂಘಟನೆಯನ್ನು ಸಾಮೂಹಿಕವಾಗಿ ದೂಷಣೆ ಮಾಡುವಂತಿಲ್ಲ ಎಂದು ಹೇಳಿ ಆರ್‍ಎಸ್‍ಎಸ್ ಬಳಿ ಕ್ಷಮೆ ಯಾಚಿಸುವಂತೆ ಸೂಚನೆ ನೀಡಿದೆ. ಇಲ್ಲವಾದಲ್ಲಿ ಮುಂದಿನ ವಿಚಾರಣೆ ಎದುರಿಸಬೇಕೆಂದು ಎಚ್ಚರಿಕೆ ನೀಡಿದೆ.
ರಾಹುಲ್ ಪರ ವಕೀಲರು ಇತಿಹಾಸದಲ್ಲಿ ಇದು ದಾಖಲಾಗಿದೆ ಎಂದು ವಾದವನ್ನು ಮಂಡಿಸಿ ರಾಹುಲ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಮುಂದಿನ ಅರ್ಜಿ ವಿಚಾರಣೆಯನ್ನು ಕೋರ್ಟ್ ಜುಲೈ 27ಕ್ಕೆ ಮುಂದೂಡಿದೆ.
ಮಹರಾಷ್ಟ್ರದ ಥಾಣೆಯಲ್ಲಿ ಮಾರ್ಚ್ 2014ರಂದು ನಡೆದ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ರಾಹುಲ್ ಗಾಂಧಿ ಆರ್‍ಎಸ್‍ಎಸ್ ಮೇಲೆ ಗಂಭೀರ ಆರೋಪ ಮಾಡಿದ್ದರು.
The post ಆರ್‍ಎಸ್‍ಎಸ್‍ನಲ್ಲಿ ಕ್ಷಮೆ ಕೇಳಿ ಇಲ್ಲ ವಿಚಾರಣೆ ಸಿದ್ಧರಾಗಿ: ರಾಹುಲ್‍ಗೆ ಸುಪ್ರೀಂ appeared first on Kannada Public tv.