-ಬಂಧನ ಭೀತಿಯಲ್ಲಿ ಬೆಂಬಲಿಗರೂ ನಾಪತ್ತೆ
ಮೈಸೂರು: ಜಿಲ್ಲಾಧಿಕಾರಿ ಶಿಖಾ ಅವರಿಗೆ ಧಮ್ಕಿ ಹಾಕಿದ್ದ ಪ್ರಕರಣ ಸಂಬಂಧ ಎಫ್‍ಐಆರ್ ದಾಖಲಾಗಿ 17 ದಿನವಾದ್ರು ಆರೋಪಿ ಮರಿಗೌಡ ಬಂಧನವಾಗಿಲ್ಲ.
ಮೈಸೂರು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಮರಿಗೌಡ ತಲೆಮರಿಸಿಕೊಂಡಿದ್ದು, ಬಂಧನ ಭೀತಿಯಲ್ಲಿ ಆತನ ಬೆಂಬಲಿಗರು ಸಹ ನಾಪತ್ತೆಯಾಗಿದ್ದಾರೆ. ಇನ್ನು ಈ ಸಂಬಂಧ ನಜರ್ ಬಾದ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ರು, ಕನಿಷ್ಠ ಪಕ್ಷ ಮರಿಗೌಡ ಹುಡುಕಾಟಕ್ಕೂ ಪೊಲೀಸರು ಮುಂದಾಗಿಲ್ಲ. ಬದಲಾಗಿ ಮರಿಗೌಡರಿಗೆ ಜಾಮೀನು ಸಿಗಲಿ ಅಂತಲೇ ಪೊಲೀಸರು ಕಾಯುತ್ತಿದ್ದಂತೆ ಇದೆ.
ಈಗಾಗಲೇ ಮೈಸೂರು ಕೋರ್ಟ್‍ನಲ್ಲಿ ಜಾಮೀನು ಅರ್ಜಿ ತಿರಸ್ಕಾರಗೊಂಡಿದ್ದು, ಜಾಮೀನಿಗಾಗಿ ಮರಿಗೌಡ ಹೈಕೊರ್ಟ್ ಮೊರೆ ಹೋಗಿದ್ದಾರೆ. ಈ ನಡುವೆ ಯಾವುದೇ ಕಾರಣಕ್ಕೂ ಕೊಟ್ಟಿರುವ ಕೇಸ್ ಹಿಂಪಡೆಯುವುದಿಲ್ಲ ಎಂದು ಮೈಸೂರು ಡಿಸಿ ಶಿಖಾ ಸ್ಪಷ್ಟಪಡಿಸಿದ್ದಾರೆ.
ನಿನ್ನೆಯಷ್ಟೆ ಡಿವೈಎಸ್‍ಪಿ ಗಣಪತಿ ಪ್ರಕರಣದಲ್ಲಿ ಸಚಿವ ಜಾರ್ಜ್ ವಿಚಾರದಲ್ಲಿ ಹಿನ್ನಡೆ ಅನುಭವಿಸಿದ್ದ ಸಿಎಂಗೆ ಈ ಪ್ರಕರಣದಲ್ಲೂ ಹಿನ್ನಡೆಯಾಗುತ್ತಾ ಎಂದು ನೋಡಬೇಕು. ಒಂದು ವೇಳೆ ಹೈಕೋರ್ಟ್‍ನಲ್ಲೂ ಜಾಮೀನು ಸಿಗಲಿಲ್ಲ ಎಂದ್ರೆ ಮರಿಗೌಡ ಬಂಧನ ಖಚಿತವಾಗಲಿದೆ.
The post ಎಫ್‍ಐಆರ್ ದಾಖಲಾಗಿದ್ರೂ ಮರಿಗೌಡ ಹುಡುಕಾಟಕ್ಕೆ ಪೊಲೀಸರ ಹಿಂದೇಟು appeared first on Kannada Public tv.