ಮುಂಬೈ: ಕನ್ನಡ ಬೆಡಗಿ ದೀಪಿಕಾ ಪಡುಕೋಣೆ, ಬಾಳಿವುಡ್‍ನಲ್ಲೀಗ ನಂಬರ್ ಒನ್ ನಟಿ ಮರೆಯುತ್ತಿದ್ದಾರೆ. ಇದೀಗ ಹಾಲಿವುಡ್‍ನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ರೆ ಸ್ಟಾರ್ ಪಟ್ಟ ನೀಡಿದ ಸಂಜಯ್ ಲೀಲಾ ಬನ್ಸಾಲಿ ಚಿತ್ರವನ್ನೇ ದೀಪಿಕಾ ರಿಜೆಕ್ಟ್ ಮಾಡಿದ್ದಾರಂತೆ.
ಹೌದು. ಬನ್ಸಾಲಿ ಹಾಗೂ ದೀಪಿಕಾ ಕಾಂಬಿನೇಷನ್ ಗೋಲಿಯೋಂಕಿ ರಾಸ್‍ಲೀಲಾ ರಾಮ್‍ಲೀಲಾ ಹಾಗೂ ಬಾಜಿರಾವ್ ಮಸ್ತಾನಿ ಚಿತ್ರದಲ್ಲಿ ಸೂಪರ್ ಹಿಟ್ ಆಗಿತ್ತು. ಈ ಎರಡು ಚಿತ್ರದ ನಟನೆಗೂ ದೀಪಿಕಾಗೆ ಪ್ರಶಸ್ತಿಗಳು ಲಭಿಸಿವೆ. ಆದ್ರೆ ಬನ್ಸಾಲಿ ಮುಂದಿನ ಚಿತ್ರ ಪದ್ಮಾವತಿಯಲ್ಲಿ ನಟಿಸಲು ದೀಪಿಕಾ ಒಲ್ಲೆ ಅಂದಿದ್ದು, ಬಾಲಿವುಡ್ ಮಂದಿ ತೆಲೆಕೆಡಿಸಿಕೊಂಡಿದ್ದಾರೆ.
ನಟಿಸ್ತಿಲ್ಲ ಯಾಕೆ?: ಮೂಲಗಳ ಪ್ರಕಾರ ಬನ್ಸಾಲಿ ಅವರ ಮುಂದಿನ ಚಿತ್ರ ಪದ್ಮಾವತಿಯಲ್ಲಿ ದೀಪಿಕಾ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ರಣ್‍ವೀರ್ ಚಿತ್ರದಲ್ಲಿ ಭಗ್ನಪ್ರೇಮಿ ಅಲ್ಲಾವುದ್ದೀನ್ ಕಿಲ್ಜಿ ಪಾತ್ರದಲ್ಲಿ ಮಿಂಚಲಿದ್ದಾರೆ. ಆದ್ರೆ ಪದ್ಮಾವತಿ ಪತಿ ರಾಜ ರಾವಲ್ ರತನ್ ಸಿಂಗ್ ಪಾತ್ರಕ್ಕೆ ಟೆಲಿವಿಷನ್ ನಟನನ್ನು ಆಯ್ಕೆ ಮಾಡಲಾಗಿದೆಯಂತೆ. ಅಲ್ಲದೇ ಚಿತ್ರದಲ್ಲಿ ದೀಪಿಕಾ ಹಾಗೂ ರಣ್‍ವೀರ್ ನಡುವೆ ಹೆಚ್ಚು ಸೀನ್‍ಗಳೂ ಇರುವುದಿಲ್ಲವಂತೆ. ಬದಲಾಗಿ ಪತಿ ಪಾತ್ರಧಾರಿಯೇ ಜೊತೆಯೇ ದೀಪಿಕಾ ರೋಮ್ಯಾಂಟಿಕ್ ಸೀನ್ ಮಾಡಬೇಕಾಗುತ್ತದೆಯಂತೆ. ಇದೆಲ್ಲದ್ರಿಂದ ಸಿಟ್ಟಿಗೆದ್ದಿರುವ ದೀಪಿಕಾ ನಾನು ಟೆಲಿವಿಷನ್ ನಟನ ಜೊತೆ ನಟಿಸುವುದಿಲ್ಲವೆಂದು ದೀಪಿಕಾ ಹೇಳಿದ್ದಾಳಂತೆ.
ಸದ್ಯ ದೀಪಿಕಾಳ ಈ ವರೆಸೆಯಿಂದ ಸಂಜಯ್ ಲೀಲಾ ಬನ್ಸಾಲಿ ತೆಲೆಕೊಡಿಸಿಕೊಂಡಿದ್ದಾರಂತೆ. ಆದ್ರೆ ದೀಪಿಕಾಗೆ ಸ್ಟಾರ್‍ಗಿರಿ ತಂದುಕೊಟ್ಟ ನಿರ್ದೇಶಕನಿಗೆ ಹೀಗೆ ತಿರುಗೇಟು ನೀಡಿರುವುದಕ್ಕೆ ಬಾಲಿವುಡ್ ಮಂದಿ ಶಾಕ್ ಆಗಿದ್ದು, ಸ್ಟಾರ್‍ನಟಿ ಎಂಬ ಕಾರಣಕ್ಕೆ ದೀಪಿಕಾ ದರ್ಪ ತೋರುತ್ತಿದ್ದಾಳೆ ಎಂಬ ಮಾತುಗಳು ಕೇಳಿಬರುತ್ತಿವೆ.
The post ಲೀಲಾ, ದೀವಾನಿ ಪಾತ್ರ ನೀಡಿದ ಬನ್ಸಾಲಿ ಚಿತ್ರದಲ್ಲಿ ನಟಿಸಲ್ಲ ಅಂದ್ಲು ದೀಪಿಕಾ!? appeared first on Kannada Public tv.