ಬೆಂಗಳೂರು: ಹುಡುಗಿಯ ಹಿಂದೆ ಬಿದ್ದು ಕಾಡಿ ಬೇಡಿ ಮದ್ವೆಯಾದ ವ್ಯಕ್ತಿಯೊಬ್ಬ ಮಗು ಆದ್ಮೇಲೆ ಹೆಂಡ್ತಿ ಮಗುವನ್ನು ಬಿಟ್ಟು ಪರಾರಿಯಾಗಿದ್ದಾನೆ. ರಿಜಿಸ್ಟ್ರಾರ್ ಮ್ಯಾರೇಜ್ ಆಗಿರುವ ಆಸಾಮಿ ಹೆಂಡತಿಯನ್ನು ಬಿಟ್ಟಿ ಹೋಗುವ ಮೊದಲು ಎಲ್ಲಾ ದಾಖಲೆ. ಫೋಟೋಗಳನ್ನು ಕದ್ದು ಪರಾರಿಯಾಗಿದ್ದಾನೆ.
ಬೆಂಗಳೂರಿನ ಥಣಿಸಂದ್ರದ ಸಂಗೀತಾ, ಯಲಹಂಕದ ಗಿರೀಶ್‍ಬಾಬು 7 ವರ್ಷಗಳ ಹಿಂದೆ ಪ್ರೀತಿಸಿ ಮದ್ವೆಯಾಗಿದ್ದರು. ಆದ್ರೆ ಮದ್ವೆಯಾಗಿ ಒಂದು ಮಗು ಆದ್ಮೇಲೆ ಗಿರೀಶ್ ಬಾಬು ಪತ್ನಿಯನ್ನ ಬಿಟ್ಟುಹೋಗಿದ್ದಾನೆ. ನೊಂದ ಪತ್ನಿ ಸಂಗೀತಾ ಪತಿ ಮನೆಗೆ ಬಂದು ಮನೆಯ ಕಿಟಕಿ ಗಾಜು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ಇನ್ನೂ ಗಿರೀಶ್‍ಬಾಬು ಮನೆಯವರು ನೀನು ನನ್ನ ಮಗನನ್ನ ಮದ್ವೆಯಾಗಿರೋದೇ ನಮಗೆ ಗೊತ್ತಿಲ್ಲ. ಹಾಗೇನಾದ್ರೂ ನಮ್ಮ ಮಗನನ್ನು ಮದ್ವೆಯಾಗಿದ್ರೆ ವಿಚ್ಛೇದನ ಕೊಟ್ಟುಬಿಡು. ಇಲ್ಲಾಂದ್ರೆ 10 ಲಕ್ಷ ರೂಪಾಯಿ ಕೊಡು ಅಂತಾರೆ ಅಂತ ಸಂಗೀತಾ ಆರೋಪಿಸಿದ್ದಾರೆ.
ಒಟ್ನಲ್ಲಿ ಕಾಡಿಬೇಡಿ ಪ್ರೀತಿ ಮಾಡಿದ್ದ ಪ್ರೇಮಿ ಗಿರೀಶ್ ಬಾಬು ಈಗ ಎಸ್ಕೇಪ್ ಆಗಿದ್ದಾನೆ. ಇನ್ನೂ ಗಂಡ ಹೆಂಡಿರ ಕಿತ್ತಾಟದಿಂದ ಮಗು ಅನಾಥವಾಗಿದೆ. ಈಗ ನೊಂದ ಮಹಿಳೆ ನ್ಯಾಯಕ್ಕಾಗಿ ಮೊರೆಯಿಡುತ್ತಿದ್ದಾರೆ.
The post ಕಾಡಿ ಬೇಡಿ ಪ್ರೀತಿಸಿ ಮದುವೆಯಾದ, ಮಗು ಆದ್ಮೇಲೆ ಕೈಕೊಟ್ಟ appeared first on Kannada Public tv.