-ಗರ್ಭಿಣಿಯರು ಸೇರಿ 150 ಕ್ಕೂ ಹೆಚ್ಚು ಜನರ ಸ್ಥಿತಿ ಅತಂತ್ರ
ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ನೀಲಕಂಠರಾಯನ ಗಡ್ಡೆ ಗ್ರಾಮ ಮತ್ತೇ ಜಲಾವೃತಗೊಂಡಿದೆ.
ಮಹಾರಾಷ್ಟ್ರದಲ್ಲಿ ಭಾರಿ ಮಳೆ ಹಿನ್ನೆಲೆ, ಆಲಮಟ್ಟಿ ಜಲಾಶಯ ಭರ್ತಿಯಾಗಿದೆ. ಅಲ್ಲಿಂದ ಯಾದಗಿರಿ ಬಸವಸಾಗರ ಜಲಾಶಯಕ್ಕೆ 1 ಲಕ್ಷ ಕ್ಯುಸೆಕ್‍ಗೂ ಅಧಿಕ ನೀರು ಹರಿದುಬಂದಿದೆ. ಹೀಗಾಗಿ ನಿನ್ನೆ ರಾತ್ರಿ 1 ಲಕ್ಷ 40 ಸಾವಿರ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಟ್ಟಿದ್ದರಿಂದ ಎಂದಿನಂತೆ ನೀಲಕಂಠರಾಯನ ಗಡ್ಡೆ ಗ್ರಾಮ ಜಲಾವೃತಗೊಂಡಿದೆ.
ಗ್ರಾಮದಲ್ಲೀಗ ಇಬ್ಬರು ತುಂಬು ಗರ್ಭಿಣಿಯರು ಸೇರಿದಂತೆ, 150 ಕ್ಕೂ ಹೆಚ್ಚು ಜನರು ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ. ಗ್ರಾಮಕ್ಕೆ ಬೇರೆಡೆಯಿಂದ ಬಂದ ಸಂಬಂಧಿಕರೂ ಸಹ ಅಲ್ಲೇ ಬಿಡಾರ ಹೂಡಿದ್ದಾರೆ. ಇತ್ತ, ಪರಿಸ್ಥಿತಿ ಅರಿಯಲು ಸುರಪುರ ತಹಸೀಲ್ದಾರ ಅರುಣಕುಮಾರ್, ನೀಲಕಂಠರಾಯನ ಗಡ್ಡೆ ಗ್ರಾಮದತ್ತ ತೆರಳಿದ್ದು, ಜನರ ಸುರಕ್ಷತೆಗೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
The post ಯಾದಗಿರಿಯ ನೀಲಕಂಠರಾಯನ ಗಡ್ಡೆ ಗ್ರಾಮ ಜಲಾವೃತ appeared first on Kannada Public tv.