ನೀವ್ಯಾವತ್ತಾದ್ರೂ ನೀವು ಹಾಕೋ ಶರ್ಟ್‍ನ ಬಟನ್ ಬಗ್ಗೆ ಯೋಚನೆ ಮಾಡಿದ್ದೀರಾ..? ಇಲ್ಲಾಂದ್ರೆ ನೀವು ಈ ಬಗ್ಗೆ ಯೋಚನೆ ಮಾಡ್ಲೇಬೇಕು. ಪುರಷರ ಶರ್ಟ್ ಬಟನ್ ಎಡಕ್ಕೆ, ಮಹಿಳೆಯರ ಉಡುಪಿನಲ್ಲಿ ಬಲಕ್ಕೆ ಬಟನ್‍ಗಳಿರುತ್ತವೆ.
ಹುಡುಗಿಯರೇ, ನೀವು ಯಾವತ್ತಾದ್ರೂ ನಿಮಗೇ ಗೊತ್ತಾಗದಂತೆ ಹುಡುಗರ ಶರ್ಟ್ ಖರೀದಿಸಿದ್ದಾರಾ? ಒಂದು ವೇಳೆ ಯಾರಾದರೂ ಹಾಗೆ ಹುಡುಗರ ಶರ್ಟ್ ಖರೀದಿಸಿ ಹಾಕೊಂಡಿದ್ದಾರೆ ಅಂತ ಗೊತ್ತಾಗೋದು ಹೇಗೆ? ಯಾವತ್ತಾದ್ರೂ ನೀವು ಪುರುಷರ ಮತ್ತು ಮಹಿಳೆಯರ ಶರ್ಟಿನ ಗುಂಡಿ(ಬಟನ್)ಗಳಲ್ಲಿರುವ ವ್ಯತ್ಯಾಸವನ್ನು ಗಮನಿಸಿದ್ದರೆ ನಿಮಗೆ ಇದರ ಉತ್ತರ ಸುಗುತ್ತೆ.
ಪುರುಷರ ಶರ್ಟ್ ಬಟನ್‍ಗಳು ಎಡಕ್ಕೆ ಮತ್ತು ಮಹಿಳೆಯರ ಶರ್ಟ್ ಬಟನ್‍ಗಳು ಬಲಕ್ಕೆ ಇರುವುದನ್ನ ಗಮನಿಸಿ. ಅಯ್ಯೋ ಹೌದಲ್ವಾ ಇಷ್ಟು ದಿನ ನೋಡೇ ಇರಲಿಲ್ಲ ಅಂದ್ರಾ? ಹೌದು ಯಾವುದೇ ಶರ್ಟ್ ಖರೀದಿಸಿದ್ರೂ ಅದು ಮಹಿಳೆಯರದ್ದಾಗಿದ್ರೆ ಬಟನ್ ಬಲಕ್ಕೆ ಇರುತ್ತೆ, ಪುರುಷರದ್ದಾಗಿದ್ರೆ ಎಡಕ್ಕೆ ಇರುತ್ತೆ. ಅದ್ಯಾಕಪ್ಪಾ ಹಂಗೆ ಅಂತೀರಾ/ ಅದಕ್ಕೆ ಬೇಕಾದಷ್ಟು ಕಾರಣ ಇದೆ. ಅದ್ರಲ್ಲಿ ಪ್ರಮುಖವಾದ 5 ಕಾರಣಗಳೇನು ಅನ್ನೋದನ್ನ ಮುಂದೆ ಓದಿ:
1. ಮೊದಲನೇ ವಾದದಂತೆ, ಅಂದಿನ ಕಾಲದಲ್ಲಿ ಬಟನ್‍ಗಳು ಅತ್ಯಂತ ದುಬಾರಿ ವಸ್ತುವಾಗಿದ್ದವು. ರಾಜವಂಶಸ್ಥರು ಮಾತ್ರ ಬಟನ್‍ಗಳ ವೆಚ್ಚವನ್ನು ಭರಿಸಬಹುದಿತ್ತು. ಆದ್ದರಿಂದ ರಾಜ ರಾಣಿಯರ ಉಡುಪಿನಲ್ಲಿ ಮಾತ್ರ ಟೈಲರ್‍ಗಳು ಬಟನ್‍ಗಳನ್ನು ಬಳಸುತ್ತಿದ್ದರು. ರಾಜರು ಸ್ವತಃ ತಾವೇ ಉಡುಪನ್ನು ಧರಿಸುತ್ತಿದ್ದರಿಂದ ಅವರ ಶರ್ಟ್‍ನಲ್ಲಿ ಬಟನ್‍ಗಳನ್ನು ಬಲಕ್ಕೆ ಹೊಲಿಯಲಾಗುತ್ತಿತ್ತು. ಅವರೇ ಬಟ್ಟೆಯನ್ನು ತೊಡುವಾಗ ಬಲದಿಂದ ಎಡಕ್ಕೆ ಅನ್ ಬಟನ್ ಮಾಡಿ ಶರ್ಟ್ ತೆಗೆಯಲು ಸುಲಭವಾಗುತ್ತಿತ್ತು. ಆದರೆ ರಾಣಿಯರು ಉಡುಪು ಧರಿಸಲು ಸಖಿಯರ ಸಹಾಯ ಪಡೆಯುತ್ತಿದ್ದರು. ಸಾಮಾನ್ಯವಾಗಿ ಸಖಿಯರು ಬಲಗೈಯನ್ನು ಬಳಸುತ್ತಿದ್ದರಿಂದ ಬಟನ್ ಹಾಕಲು ಅನುಕೂಲವಾಗುವಂತೆ ರಾಣಿಯರ ಉಡುಪಿನಲ್ಲಿ ಬಟನ್ ಅಥವಾ ಹುಕ್‍ಗಳನ್ನು ಎಡಕ್ಕೆ ಹೊಲಿಯಲಾಗುತ್ತಿತ್ತು. ಒಂದು ವೇಳೆ ರಾಣಿಯರ ಉಡುಪಿನಲ್ಲಿ ಬಟನ್ ಬಲಕ್ಕಿದ್ದರೆ ಸಖಿಯರಿಗೆ ಮುಂದೆ ನಿಂತು ಬಟನ್ ತೆಗೆಯಲು ಕಷ್ಟ ಎನ್ನುವುದು ಟೈಲರ್‍ಗಳಿಗೆ ಗೊತ್ತಿತ್ತು.
2. ಎರಡನೇ ವಾದವೆಂದರೆ ರಾಜರು ಖಡ್ಗವನ್ನು ಬಲಗೈಯಲ್ಲಿ ಹಿಡಿಯುತ್ತಿದ್ದರಿಂದ ಬಟನ್‍ಗಳನ್ನು ಸಲೀಸಾಗಿ ತೆಗೆಯಲು ಸಹಾಯವಾಗುವಂತೆ ಎಡ ಭಾಗದಲ್ಲಿ ಹೊಲಿಯಲಾಗುತ್ತಿತ್ತು. ಮಹಿಳೆಯರು ಎದೆಹಾಲು ಕುಡಿಸುವಾಗ ಮಗುವನ್ನು ಎಡಗೈಯ್ಯಲ್ಲಿ ಹಿಡಿದುಕೊಳ್ಳುತ್ತಿದ್ದರಿಂದ ಮಹಿಳೆಯರ ರವಿಕೆಯಲ್ಲಿ ಬಟನ್‍ಗಳನ್ನು ಬಲಕ್ಕೆ ಹೊಲಿಯಲಾಗುತ್ತಿತ್ತು.
3. ಇನ್ನು ಮೂರನೆಯದಾಗಿ ರಾಜ ನೆಪೋಲಿಯನ್ ಬೊನಪಾರ್ಟೆ ಶರ್ಟಿನೊಳಗೆ ತನ್ನ ಎಡಗೈಯನ್ನು ಹಾಕಿ ಪೋಸ್ ನೀಡಿದ್ದ ಚಿತ್ರ ಅಂದಿನ ಕಾಲದಲ್ಲಿ ಪ್ರಸಿದ್ಧವಾಗಿತ್ತು. ಮಹಿಳೆಯರು ಚಿತ್ರದಲ್ಲಿರುವಂತೆ ಎಡಗೈಯ್ಯನ್ನು ಶರ್ಟಿನೊಳಗೆ ಹಾಕಿ ರಾಜನನ್ನು ಅಣಕಿಸುತ್ತಿದ್ದರು. ಆದ್ದರಿಂದ ಮಹಿಳೆಯರ ಶರ್ಟಿನ ಬಟನ್‍ಗಳನ್ನು ವಿರುದ್ಧ ದಿಕ್ಕಿಗೆ ಅಂದರೆ ಎಡಭಾಗದಲ್ಲಿ ಹೊಲಿಯಬೇಕು ಎಂದು ಘೋಷಿಸಿದ್ದ. ಶರ್ಟಿನ ಬಟನ್ ಎಡಕ್ಕಿದ್ದಾಗ ಎಡಗೈಯ್ಯನ್ನು ಶರ್ಟಿನೊಳಗೆ ಹಾಕಲಾಗುವುದಿಲ್ಲ. ಆದ್ದರಿಂದ ಮಹಿಳೆಯರು ನನ್ನುನ್ನು ಚಿತ್ರದಲ್ಲಿರುವಂತೆಯೇ ಅಣಕಿಸಲು ಸಾಧ್ಯವಾಗುವುದಿಲ್ಲ ಎನ್ನುವುದು ರಾಜನ ಉದ್ದೇಶವಾಗಿತ್ತು.
4. ಮೊದಲಿಗೆ ಮಹಿಳೆಯರು ಪುರುಷರಂತೆಯೇ ಉಡುಪು ಧರಿಸಿ ನಾವು ಕೂಡ ಪುರುಷರಷ್ಟೇ ಸಮಾನರು ಎಂದು ತೋರಿಸುತ್ತಿದ್ದರು. ಆದರೂ ಅವರಿಗಿಂತ ನಾವು ವಿಭಿನ್ನ ಎಂದು ತೋರಿಸುವ ಸಲುವಾಗಿ ಮಹಿಳೆಯರು ತಮ್ಮ ಉಡುಪಿನಲ್ಲಿ ಒಂದಿಷ್ಟು ಬದಲಾವಣೆ ಬೇಕೆಂದು ಬಯಸಿದರು. ಈ ಭಾವನೆಗೆ ನೀರೆರೆಯುವಂತೆ ಮಹಿಳೆಯರ ಉಡುಪಿನಲ್ಲಿ ಬಟನ್‍ಗಳನ್ನು ಎಡಕ್ಕೆ ಹೊಲಿಯಲು ಶುರುವಾಯಿತು.
5. ಕಾರ್ಖಾನೆಗಳಲ್ಲಿ ಬಟ್ಟೆಗಳ ಉತ್ಪಾದನೆ ಹೆಚ್ಚಾದಂತೆಲ್ಲ ತಮ್ಮ ಬ್ರಾಂಡ್‍ನಲ್ಲಿ ಹೊಸತನ ತಂದು ಹೆಚ್ಚಿಗೆ ಮಾರಾಟವಾಗುವಂತೆ ಮಾಡಬೇಕು ಎನ್ನುವ ಉದ್ದೇಶದಿಂದ ಸ್ತ್ರೀಯರ ಮತ್ತು ಪುರುಷರ ಶರ್ಟಿನ ವಿನ್ಯಾಸದಲ್ಲಿ ಬದಲಾವಣೆಯನ್ನು ತರಲಾಯಿತು. ಅಂದಿನಿಂದ ಪುರುಷರ ಶರ್ಟ್‍ನಲ್ಲಿ ಬಲಕ್ಕೆ ಮತ್ತು ಮಹಿಳೆಯರ ಶರ್ಟ್‍ನಲ್ಲಿ ಎಡಕ್ಕೆ ಬಟನ್‍ಗಳನ್ನು ಅಳವಡಿಸಲಾಗುತ್ತಿದೆ ಎನ್ನುವುದು ಮತ್ತೊಂದು ವಾದ.