ತುಮಕೂರು: ಶಾಲೆಯಲ್ಲಿ ಕಟ್ಟಡದ ಸೀಲಿಂಗ್ ಫ್ಯಾನ್ ಬಿದ್ದು ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹೊಸಕೆರೆಯಲ್ಲಿ ನಡೆದಿದೆ.
ಹೊಸಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತುಂಬಾ ಹಳೆಯ ಕಟ್ಟಡಕ್ಕೆ ಸಿಲಿಂಗ್ ದುರಸ್ಥಿಯನ್ನು ಮಾಡಲಾಗಿತ್ತು. ಅದು ಸರಿಯಾಗಿ ಕೂರದ ಕಾರಣ ಸೀಲಿಂಗ್ ಕಳಚಿ ಬಿದ್ದು ಈ ಅವಘಡ ನಡೆದಿದೆ.
ಲಕ್ಷ್ಮೀ ,ಸಹನ ,ಜಯಂತ್ ಹಾಗೂ ಪ್ರಜ್ವಲ್ ಎಂಬ ನಾಲ್ವರು ವಿಧ್ಯಾರ್ಥಿಗಳು ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ವಿದ್ಯಾರ್ಥಿಗಳ ತಲೆಗೆ ಗಂಭೀರ ಗಾಯಗಳಾಗಿವೆ. ವಿದ್ಯಾರ್ಥಿಗಳಿಗೆ ಹೊಸಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಶಾಲಾ ಕಟ್ಟಡ ಹಳೆಯದಾದ್ದರಿಂದ ಕಟ್ಟಡಕ್ಕೆ 2 ತಿಂಗಳ ಹಿಂದೆ ನೂತನವಾಗಿ ಸೀಲಿಂಗ್ ಮಾಡಲಾಗಿತ್ತು. ಆದರೆ ತರಗತಿಯಲ್ಲಿ 24 ವಿದ್ಯಾರ್ಥಿಗಳಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಶಾಲೆಯ ಮುಖ್ಯೋಪಾದ್ಯಯರು ಹೇಳಿದರು.