ಹುಬ್ಬಳ್ಳಿ: ಶಾಲಾ ವಾಹನಕ್ಕೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಹಿನ್ನಲೆಯಲ್ಲಿ 11 ವಿದ್ಯಾರ್ಥಿಗಳು ಗಾಯಗೊಂಡಿರುವ ಈ ಘಟನೆ ಹುಬ್ಬಳ್ಳಿಯ ಪಾಲಿಕೊಪ್ಪದಲ್ಲಿ ನಡೆದಿದೆ.
ಅಪಘಾತಕ್ಕೊಳಗಾದ ವ್ಯಾನ್ ಅದರಗುಂಚಿಯ ಸಿಐಸಿ ಆಂಗ್ಲ ಮಾಧ್ಯಮದ ಶಾಲೆಯದಾದ್ದು ಎಲ್‍ಕೆಜಿಯಿಂದ ಐದನೇ ತರಗತಿವರೆಗಿನ ಮಕ್ಕಳು ಸ್ಕೂಲ್ ವ್ಯಾನ್‍ನಲ್ಲಿ ಪ್ರಯಾಣಿಸುತ್ತಿದ್ದರು. ಶಾಲಾ ವ್ಯಾನ್ ಚಾಲಕನ ಅಜಾಗೂರಕತೆಯಿಂದ ಅಪಘಾತ ನಡದಿದೆ ಎಂದು ಎನ್ನಲಾಗುತ್ತಿದ್ದು ಕಾರು ಹುಬ್ಬಳ್ಳಿಯಿಂದ ಹಾವೇರಿಯತ್ತ ಸಾಗುತ್ತಿತ್ತು.
ವ್ಯಾನ್‍ನಲ್ಲಿದ್ದ 20 ಮಕ್ಕಳ ಪೈಕಿ 11 ಮಕ್ಕಳು ಗಾಯಗೊಂಡಿದ್ದು, ಅದರಲ್ಲಿ ಇಬ್ಬರಿಗೆ ತಲೆಗೆ ಪೆಟ್ಟಾಗಿದ್ದು ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ವ್ಯಾನ್ ಚಾಲಕ ನಾಪತ್ತೆಯಾಗಿದ್ದು, ಕಾರಿನ ಚಾಲಕ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಸಂಚಾರಿ ಗ್ರಾಮಾಂತರ ಠಾಣೆಯ ಪೊಲೀಸರು ಆಗಮಿಸಿದ್ದು ಪ್ರಕರಣ ದಾಖಲಾಗಿದೆ.