ಬೆಂಗಳೂರು: ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಇಂದು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಮೆರವಣಿಗೆಗೆ ಅವಕಾಶ ಕಲ್ಪಿಸೋದು ಬೇಡ. ಟಿಪ್ಪು ಜಯಂತಿಯ ಶಾಂತಿಯುತ ಆಚರಣೆ ನಡೆಯಲಿ ಎಂದು ಸಿಎಂ ಸೂಚಿಸಿದ್ದಾರೆ.
ನವೆಂಬರ್ 10 ರಂದು ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಡಿ.ಜಿ.ಪಿ ಓಂಪ್ರಕಾಶ್, ಗುಪ್ತಚರ ಎಸ್‍ಪಿ ಮಧುರ ವೀಣಾ, ಕೆಎಸ್‍ಆರ್‍ಪಿ ಐಜಿ ರವಿ ಎಸ್, ಎಡಿಜಿಪಿ ಅಮರ ಕುಮಾರ್ ಪಾಂಡೆ, ಎಡಿಜಿಪಿ ಲಾ & ಆರ್ಡರ್ ಅಲೋಕ್ ಮೋಹನ್, ಪಿಕೆ ಗರ್ಗ್, ಪ್ರವೀಣ್ ಸೂದ್, ಎಡಿಜಿ ಸಂಜಯ್ ಸಹಾಯ್, ಸುನಿಲ್ ಕುಮಾರ್, ಅಲೋಕ್ ಕುಮಾರ್, ಕಮಲ್ ಪಂಥ್, ಎಂ.ಎನ್.ರೆಡ್ಡಿ, ಹೀತೇಂದ್ರ, ಚರಣ್ ರೆಡ್ಡಿ, ಹರಿಶೇಖರನ್, ಹೇಮಂತ್ ನಿಂಬಾಳ್ಕರ್, ಎ.ಎಸ್‍ಎಸ್ ಮೂರ್ತಿ, ಔರಾದ್ಕರ್ ಭಾಗವಹಿಸಿದ್ದರು.