– ಶಾಲೆಯ ಚಿತ್ರಣವನ್ನೇ ಬದಲಿಸಿದ ರಾಯಚೂರಿನ ಮಾದರಿ ಶಿಕ್ಷಕ
ರಾಯಚೂರು: ಒಬ್ಬ ಮಾದರಿ ಶಿಕ್ಷಕನಿದ್ರೆ ಇಡೀ ಶಾಲೆಯ ಚಿತ್ರಣವೇ ಬದಲಾಗುತ್ತೆ ಅನ್ನೋದಕ್ಕೆ ನಿದರ್ಶನ ನಮ್ಮ ಇವತ್ತಿನ ಪಬ್ಲಿಕ್ ಹೀರೋ. ರಾಯಚೂರಿನ ಡೊಂಗರಾಂಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕ ಶರಣಬಸಪ್ಪ ಅವರು ಶಾಲೆಯ ಚಿತ್ರಣವನ್ನೇ ಬದಲಿಸಿದ್ದಾರೆ.
2013ರಲ್ಲಿ ಶರಣಬಸಪ್ಪ ನೀಲಗರಕರ್ ರಾಯಚೂರಿನ ಡೊಂಗರಾಂಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿಜ್ಞಾನ ಶಿಕ್ಷಕರಾಗಿ ಸೇರಿದ್ರು. ಶರಣಬಸಪ್ಪ ಬಂದಾಗ ಶಾಲೆಯಲ್ಲಿ ನಿರುಪಯುಕ್ತ ವಸ್ತುಗಳೇ ತುಂಬಿ ಹೋಗಿದ್ವಂತೆ. ಇದಕ್ಕಾಗಿ ಕೊಠಡಿಯನ್ನೇ ಮೀಸಲಿಟ್ಟಿದ್ದರಂತೆ. ಆದ್ರೆ, ಆ ನಿರುಪಯುಕ್ತ ವಸ್ತುಗಳನ್ನೇ ಬಳಸಿ ಅದೇ ಕೊಠಡಿಯನ್ನ ಪ್ರಯೋಗ ಶಾಲೆಯನ್ನಾಗಿ ಮಾಡಿದ್ದಾರೆ. ಈ ಮೂಲಕ, ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯಗಳನ್ನ ಪ್ರಯೋಗದ ಮೂಲಕ ಮನದಟ್ಟು ಮಾಡಿಸ್ತಿದ್ದಾರೆ.
ಪ್ರಯೋಗಶಾಲೆಯ ಜೊತೆಗೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯನ್ನೂ ಅಳವಡಿಸಿದ್ದಾರೆ. ಶರಣಪ್ಪ ಮೇಷ್ಟ್ರ ವಿಜ್ಞಾನ ಪ್ರಯೋಗಶಾಲೆಯನ್ನ ನೋಡೋಕೆ ಜಿಲ್ಲೆಯ ಮೂಲೆ ಮೂಲೆಯಿಂದಲೂ ಶಿಕ್ಷಕರು ಬರ್ತಿದ್ದಾರೆ. ಶಾಲಾ ಸುಧಾರಣ ಸಮಿತಿ ಹಾಗೂ ಗ್ರಾಮಸ್ಥರ ಸಹಕಾರದಿಂದ ಸುಸಜ್ಜಿತ ಪ್ರಯೋಗಶಾಲೆ ನಿರ್ಮಾಣ ಸಾಧ್ಯವಾಗಿದೆ. ಜೊತೆಗೆ ಶಿಕ್ಷಕವೃಂದವೂ ಬೆಂಬಲವಾಗಿ ನಿಂತಿದೆ ಅಂತಾರೆ ಈ ನಮ್ಮ ಪಬ್ಲಿಕ್ ಹೀರೋ.