Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80455

ಸರ್ಜಿಕಲ್ ಸ್ಟ್ರೈಕ್ ಹೇಗಿತ್ತು ಬಳಿಕ ಏನಾಯ್ತು? ಪಾಕಿಸ್ತಾನ ಎಸ್‍ಪಿ ಹೇಳ್ತಾರೆ

$
0
0

ನವದೆಹಲಿ: ಸೀಮಿತ ದಾಳಿ ನಡೆದ ಬಗ್ಗೆ ಪಾಕಿಸ್ತಾನದ ಮಿರ್‍ಪುರ್ ಗುಪ್ತಚರ ವಿಭಾಗದ ಎಸ್‍ಪಿ ಗುಲಾಂ ಅಕ್ಬರ್ ಒಪ್ಪಿಕೊಂಡಿದ್ದಾರೆ. ರಾಷ್ಟ್ರೀಯ ಮಾಧ್ಯಮ ಸಿಎನ್‍ಎನ್ ನ್ಯೂಸ್ 18 ನಡೆಸಿದ ತನಿಖಾ ವರದಿಯಲ್ಲಿ ಇದೆಲ್ಲಾ ವಿಷಯ ಬಯಲಾಗಿದೆ..

ವರದಿಗಾರ – ಗುಲಾಂ ಹೇಗಿದ್ದೀರಾ..? ನಾನು ಐಜಿ ಮುಷ್ತಾಕ್ ಮಾತಾಡುತ್ತಿರೋದು. ಹೇಳಿ ಏನಾಗಿದೆ..?
ಎಸ್‍ಪಿ ಗುಲಾಂ – ಸರ್. ಅಲ್ಲಾಹನ ದಯೆ. ನಾನು ಚೆನ್ನಾಗಿದ್ದೇನೆ

ವರದಿಗಾರ – ಅಲ್ಲಿ ಏನಾಗುತ್ತಿದೆ..? ನಿಮ್ಮ ಏರಿಯಾದಲ್ಲಿ ತುಂಬಾ ಬಿಸಿ ಏರುತ್ತಿದೆಯಲ್ಲಾ..?
ಎಸ್‍ಪಿ ಗುಲಾಂ – ಹೌದು ಸರ್. ಗಡಿಯಲ್ಲಿ ಬಿಸಿ ಇದೆ. ಅದರೆ ಬೆಳಗ್ಗೆ ಆದಷ್ಟು ಈಗ ಏನು ಆಗ್ತಿಲ್ಲ.

ವರದಿಗಾರ – ಅವರು ಹೇಳುವಂತೆ ಇದು ಸರ್ಜಿಕಲ್ ಸ್ಟ್ರೈಕಾ..?
ಎಸ್‍ಪಿ ಗುಲಾಂ – ನೀವು ಕೇಳ್ತಿರೋದು 29ನೇ ತಾರೀಖಿನಂದು ನಡೆದ ಸರ್ಜಿಕಲ್ ದಾಳಿ ಬಗ್ಗೇನಾ..? ಅದರಲ್ಲಿ ನಮ್ಮವರು ಮೂವರು ಸಾವನ್ನಪ್ಪಿದ್ದಾರೆ. ಅದನ್ನ ಅಲ್ಲಿನ ಸ್ಥಳೀಯ (ಸೈನ್ಯ) ಅಧಿಕಾರಿಗಳು ಬಹಿರಂಗಪಡಿಸಿಲ್ಲ.

ವರದಿಗಾರ – ಆದರೆ 30-40 ಮಂದಿ ಸಾವನ್ನಪ್ಪಿದ್ದಾರೆ ಎಂದು ಆ ಕಡೆಯಿಂದ ಭಾರತದವರು ಹೇಳುತ್ತಿದ್ದರಲ್ವಾ..?
ಎಸ್‍ಪಿ ಗುಲಾಂ – ಹೌದು. ಅವರು ಜಾಸ್ತಿ ಸಂಖ್ಯೆ ಹೇಳುತ್ತಿದ್ದಾರೆ. ದೊಡ್ಡ ನಾಶ ಆಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಸರ್ಜಿಕಲ್ ಸ್ಟ್ರೈಕ್‍ನಿಂದ ಹಾಗಿರೋ ಹಾನಿ ಅಷ್ಟೇನು ದೊಡ್ಡದಲ್ಲ ಸರ್.. ಆದರೆ ಭಾರತದವರು ಅಂದು ರಾತ್ರಿ ಗಡಿಯನ್ನು ಒಳನುಗ್ಗಿ ಬಂದಿದ್ದಾರೆ.

ವರದಿಗಾರ – ಆದರೆ ಯಾರೊಬ್ಬರು ಆತ್ಮುಖಂ ತನಕ ಹೋಗಿಲ್ವಾ..?
ಎಸ್‍ಪಿ ಗುಲಾಂ – ಇಲ್ಲ ಸರ್. ಅತ್ಮುಖಂ ತನಕ ಯಾರೂ ಹೋಗಿಲ್ಲ. ಆದರೆ ಲೀಪಾಗೆ ಹೋಗಿದ್ರು. ಅಲ್ಲಿ ಇಬ್ಬರನ್ನು ಕೊಂದಿದ್ದಾರೆ. ಆದಿರಾದಲ್ಲೂ ಇಬ್ಬರು ಸಾವನ್ನಪ್ಪಿದ್ದಾರೆ.

ವರದಿಗಾರ – ನಿಮ್ಮ ಪ್ರಕಾರ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ..?
ಎಸ್‍ಪಿ ಗುಲಾಂ – ಸರ್ ಸರ್ಜಿಕಲ್ ಸ್ಟ್ರೈಕ್‍ನಲ್ಲಿ ಒಟ್ಟು 12 ಮಂದಿಯಷ್ಟು ಸಾವನ್ನಪ್ಪಿದ್ದಾರೆ. ನಮ್ಮ ಪ್ರಕಾರ 12 ಮಂದಿ.

ವರದಿಗಾರ – ಒಂದೇ ಕ್ಯಾಂಪ್‍ನಲ್ಲೇ ಇಷ್ಟು ಮಂದಿ ಸತ್ತಿರೋದಾ..?
ಎಸ್‍ಪಿ ಗುಲಾಂ – ಇಲ್ಲ ಸರ್. ಒಂದೇ ಕ್ಯಾಂಪ್‍ನಲ್ಲಿ ಅಲ್ಲ. ಒಟ್ಟು ಸುತ್ತುವರೆದ ಸ್ಥಳದಲ್ಲಿ 12 ಮಂದಿ. ಇಲ್ಲಿ ಮತ್ತು ಅಲ್ಲಿ ( ಎಲ್‍ಒಸಿ ) ಸರ್..

ವರದಿಗಾರ – ಈ ಸರ್ಜಿಕಲ್ ಸ್ಟ್ರೈಕ್ ನಡೀತಲ್ವಾ..? ಯಾವ ಕ್ಯಾಂಪ್‍ಗಳ ಮೇಲೆ ದಾಳಿಯಾಗಿದೆ..?
ಎಸ್‍ಪಿ ಗುಲಾಂ – ಭಿಂಬೀರ್‍ನ ಲೀಪಾ ಮತ್ತು ಸಹ್ಮನಿ..

ವರದಿಗಾರ – ಸೋ ಈ ಎರಡು ಪೋಸ್ಟ್‍ನಲ್ಲಿ ಅವರು 12 ಮಂದಿಯನ್ನು ಕೊಂದಿದ್ದಾರೆ..?
ಎಸ್‍ಪಿ ಗುಲಾಂ – ಹೌದು ಸರ್. ಒಟ್ಟು 12 ಮಂದಿ..

ವರದಿಗಾರ – ಸತ್ತವರ ದಫನ (ಅಂತ್ಯಸಂಸ್ಕಾರ ) ಎಲ್ಲಾಯ್ತು..?
ಎಸ್‍ಪಿ ಗುಲಾಂ – ಸರ್. ಅವರವರ ಊರಲ್ಲಾಯ್ತು. ನಾವು ಶವಪೆಟ್ಟಿಗೆಗಳನ್ನು ಲೆಕ್ಕ ಮಾಡಿದ್ದೇವೆ.

ವರದಿಗಾರ – ಸೋ 12 ಶವ ಪೆಟ್ಟಿಗೆಗಳು ಇತ್ತು..?
ಎಸ್‍ಪಿ ಗುಲಾಂ – ಹೌದು ಸರ್. ಸತ್ತವರೆಲ್ಲರು ಬೇರೆಬೇರೆ ಪ್ರದೇಶದವರು. ಒಂದೆರಡು ಮಂದಿ ಒಂದೇ ಏರಿಯಾದವರು. ಒಂದೆರಡು ಮಂದಿ ಬೇರೆ ಬೇರೆ ಪ್ರದೇಶದವರು.

ವರದಿಗಾರ – ಅವರೆಲ್ಲರ ಹೆಸರಿನ ಪಟ್ಟಿ ಇದೆಯಾ..?
ಎಸ್‍ಪಿ ಗುಲಾಂ – ಇಲ್ಲ ಸರ್. ಎಲ್ಲರ ಹೆಸರು ಹೇಳೊದು ಕಷ್ಟ. ಕೆಲವರ ಹೆಸರು ಇದೆ.

ವರದಿಗಾರ – ಇವುಗಳೆಲ್ಲಾ 29ರ ಸರ್ಜಿಕಲ್ ದಾಳಿಯದ್ದಾ..?
ಎಸ್‍ಪಿ ಗುಲಾಂ – ಹೌದು ಸರ್. 29ನೇ ತಾರೀಖಿನದ್ದು.. ಅವರೆಲ್ಲಾ ಹೇಳ್ತಿದ್ದಾರಲ್ವಾ. ನಾವು ಸರ್ಜಿಕಲ್ ಮಾಡಿದ್ದೇವೆ. ಅದು ಮಾಡಿದ್ದೇವೆ, ಇದು ಮಾಡಿದ್ದೇವೆ ಅಂತ.

ವರದಿಗಾರ – ನಿಮ್ಮ ಮೊಬೈಲ್ ಸಂಪರ್ಕ ಕಟ್ ಆಗ್ತಿದೆ. ನಿಮ್ಮ ಲ್ಯಾಂಡ್‍ಲೈನ್ ನಂಬರ್ ಯಾವುದು..?
ಎಸ್‍ಪಿ ಗುಲಾಂ – ಕೋಡ್ 05822.. ಮುಜಾಫರ್‍ಬಾದ್.. ನಾನು ಬೇಸ್‍ಮೆಂಟ್‍ನಲ್ಲಿದ್ದೇನೆ. ನನ್ನ ಲ್ಯಾಂಡ್‍ಲೈನ್ ನಂಬರ್ 9201*****

ವರದಿಗಾರ – ಈಗ ನಿಮ್ಮ ಶಬ್ಧ ಸರಿಯಾಗಿ ಕೇಳುತ್ತಿದೆ. ತಾವು ಆ ಫೈಲ್ ಓದಿ ಹೇಳ್ತೀರಾ..?
ಎಸ್‍ಪಿ ಗುಲಾಂ – ಸರ್ ಅವರು ಎಲ್ಲಾ ಫೈಲ್‍ಗಳನ್ನು ತೆಗೆದುಕೊಂಡು ಬರುತ್ತಾರೆ. ಅದರಲ್ಲಿ 29ನೇ ತಾರೀಖಿನ ಎಲ್ಲಾ ಮಾಹಿತಿಗಳು ಹಾಗೂ ಹೆಸರುಗಳು ಇವೆ.

ವರದಿಗಾರ – ಆ ಫೈಲ್ ನಿಮಗೆ ಸಿಕ್ಕಿದ್ಯಾ..?
ಎಸ್‍ಪಿ ಗುಲಾಂ – ಹೌದು ಸರ್

ವರದಿಗಾರ – ಹಾ ಹೇಳಿ.
ಎಸ್‍ಪಿ ಗುಲಾಂ – ಸರ್ ಭಿಂಬರ್ ಜಿಲ್ಲೆಯ ಬಂದಾಲಾ ಸೆಕ್ಟರ್‍ನ ಝಿಲಾ ಸಮಹ್ನಿ. ಒಬ್ಬ ******, ಹವಾಲ್ದಾರ್ ********* ಲ್ಯಾನ್ಸ್‍ನಾಯ್ಕ್********* ಸಿಪಾಯಿ *********. ಇಬ್ಬರು ಝಕ್ನಿ ಹುತಾತ್ಮರಾಗಿದ್ದಾರೆ. ಆಮೇಲೆ ಮೂವರು ಹುತಾತ್ಮರಾಗಿದ್ದಾರೆ. ಅವರ ಹೆಸರು ಗೊತ್ತಿಲ್ಲ ಸರ್. ಲೀಪಾ ಹತ್ತಿರದಲ್ಲಿರುವ ಒಂದು ಮಸೀದಿಗೂ ಹಾನಿಯಾಗಿದೆ ಸರ್.

ವರದಿಗಾರ – ಹೇಳಿ, ಅಂದು ಎಷ್ಟು ಸಮಯಗಳ ಕಾಲ ಸರ್ಜಿಕಲ್ ಸ್ಟ್ರೈಕ್ ಮುಂದುವರೆದಿತ್ತು..?
ಎಸ್‍ಪಿ ಗುಲಾಂ – ಸರ್ ಅವತ್ತು ರಾತ್ರಿ 2-3 ಗಂಟೆಗಳ ಕಾಲ ನಡೆದಿದೆ. ಮದ್ಯರಾತ್ರಿ 2 ಗಂಟೆಯಿಂದ ಬೆಳಗಿನ ಜಾವ 4, 5 ಗಂಟೆ ತನಕ ನಡೆದಿದೆ. ಅಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ದಾಳಿ ನಡೆದಿದೆ.

ವರದಿಗಾರ – ಅವರು ಎಷ್ಟು ಮಂದಿ ಬಂದಿದ್ದರು.
ಎಸ್‍ಪಿ ಗುಲಾಂ – ಎಷ್ಟು ಮಂದಿ ಎಂದು ಗೊತ್ತಿಲ್ಲ ಸರ್. ಅವರು ನಮ್ಮ ಒಂದು ಪೋಸ್ಟ್‍ಗೂ ದಾಳಿ ಮಾಡಿದ್ದಾರೆ. ಹಲವು ಪ್ರದೇಶದಲ್ಲಿ ಪ್ರತೀಕಾರದ ದಾಳಿ ಮಾಡಿದ್ದಾರೆ.

ವರದಿಗಾರ – ಸತ್ತವರು ಸ್ಥಳೀಯರಾ.. ಜಿಹಾದಿಗಳಾ..?
ಎಸ್‍ಪಿ ಗುಲಾಂ – ಸರ್ ಸ್ಥಳೀಯರು ಯಾರು ಸತ್ತಿಲ್ಲ. ಜಿಹಾದಿಗಳೇ ಸತ್ತಿರೋ ಸಾಧ್ಯತೆ ಹೆಚ್ಚು..

ವರದಿಗಾರ – ನಮ್ಮ ಸೈನ್ಯ ಜಿಹಾದಿಗಳನ್ನು ಅಡಗಿಸಿಟ್ಟಿತ್ತಾ..?
ಎಸ್‍ಪಿ ಗುಲಾಂ – ಹೌದು ಸರ್. ಅದು ನಡೆದಿದೆ.


Viewing all articles
Browse latest Browse all 80455

Trending Articles



<script src="https://jsc.adskeeper.com/r/s/rssing.com.1596347.js" async> </script>