ಫ್ಲೋರಿಡಾ: ಯುವತಿಯೊಬ್ಬಳು ತನ್ನ ನೆರೆಮನೆಯ ಮತ್ತೊಬ್ಬ ಯುವತಿಗೆ ಹೊಡೆಯಲು ಹೋಗಿ ತಾನೇ ಹಿಗ್ಗಾಮುಗ್ಗಾ ಹೊಡೆಸಿಕೊಂಡಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಮೆರಿಕದ ಫ್ಲೋರಿಡಾದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿ ಆ್ಯಂಬರ್ ಕುಕ್ ತನ್ನನ್ನು ಹೊಡೆಯಲು ಬಂದ ಯುವತಿಗೆ ಸಿಕ್ಕಾಪಟ್ಟೆ ಒದೆ ಕೊಟ್ಟಿದ್ದಾಳೆ. ಮನೆ ಹತ್ತಿರ ನಿಂತಿದ್ದ ಅಂಬರ್‍ಗೆ ಕೆಂಪು ಟಾಪ್ ಧರಿಸಿದ್ದ ಯುವತಿಯೊಬ್ಬಳು ಓಡಿಬಂದು ಹೊಡೆಯಲು ಮುಂದಾಗುತ್ತಾಳೆ. ಆಗ ಆ್ಯಂಬರ್ ಆಕೆಯನ್ನ ನೆಲಕ್ಕೆ ಬೀಳಿಸಿ ಜುಟ್ಟು ಹಿಡಿದು ಮುಖ ಮೂತಿ ನೋಡದೆ ಬಾರಿಸಿದ್ದಾಳೆ. ನನ್ನ ಜಡೆ ಬಿಟ್ಟು ಬಿಡು ಎಂದು ಆ ಯುವತಿ ಕೇಳಿಕೊಂಡರೂ ಆ್ಯಂಬರ್ ಸುಮ್ಮನಾಗಲಿಲ್ಲ. ಜಗಳ ಶುರು ಮಾಡಿದ ಯುವತಿ ಸಾಕಪ್ಪ ಇವಳ ಸಹವಾಸ..! ಅಂತ ಅಲ್ಲಿಂದ ಕಾಲ್ಕಿತ್ತರೂ ಅವಳನ್ನು ಹಿಂಬಾಲಿಸಿ ಆ್ಯಂಬರ್ ಮತ್ತೆ ಹೊಡೆದಿದ್ದಾಳೆ.
ಇದನ್ನೆಲ್ಲಾ ವಿಡಿಯೋ ಮಾಡುತ್ತಿದ್ದ ಯುವಕ ಸಾಕು… ಸಾಕು… ಎಂದು ಕೂಗುವುದರೊಂದಿಗೆ ವಿಡಿಯೋ ಅಂತ್ಯವಾಗುತ್ತದೆ. ಈ ಇಬ್ಬರೂ ಅದ್ಯಾವ ಕಾರಣಕ್ಕೆ ಜಗಳ ಮಾಡಿಕೊಂಡರು ಅಂತ ಗೊತ್ತಾಗಿಲ್ಲ. ಆದ್ರೆ ಈ ವಿಡಿಯೋ ಮಾತ್ರ ಟ್ವಿಟ್ಟರ್‍ನಲ್ಲಿ 15 ಸಾವಿರಕ್ಕೂ ಹೆಚ್ಚು ಬಾರಿ ರಿಟ್ವೀಟ್ ಆಗಿದೆ.