ಕೇಪ್‍ಟೌನ್: ಕಾಡಿನ ರಾಜ ಸಿಂಹ ತನ್ನ ಘರ್ಜನೆಗೆ ಫೇಮಸ್. ಒಂದು ಬಾರಿ ಸಿಂಹ ಘರ್ಜಿಸಿದ್ರೆ ಎಂತಹವರಿಗೂ ಎದೆಯಲ್ಲಿ ನಡುಕ ಹುಟ್ಟುತ್ತದೆ. ಇಂತಹದ್ದೇ ಒಂದು ಘಟನೆ ದಕ್ಷಿಣ ಆಫ್ರಿಕಾದ ಕ್ರೂಗರ್ ನ್ಯಾಷನಲ್ ಪಾರ್ಕ್‍ನಲ್ಲಿ ನಡೆದಿದೆ.
ಪ್ರವಾಸಿಗರು ಸಿಂಹವೊಂದನ್ನ ಕಾರ್‍ನಲ್ಲಿ ಹಿಂಬಾಲಿಸುತ್ತಿದ್ದರು. ತುಂಬಾ ಸಮೀಪದಲ್ಲೇ ನಡೆದುಹೋಗ್ತಿದ್ದ ಸಿಂಹವನ್ನ ಕಾರ್‍ನಿಂದಲೇ ವಿಡಿಯೋ ಮಾಡುತ್ತಿದ್ದರು. ಆ ಸಿಂಹಕ್ಕೆ ಇದರಿಂದ ಕಿರಿಕಿರಿಯಾಗಿ ನಡೆಯೋದನ್ನ ನಿಲ್ಲಿಸಿ ಕಾರಿನತ್ತ ನೊಡಿ ಘರ್ಜಿಸಿದ್ದೇ ತಡ ಆ ಪ್ರವಾಸಿಗರು ಒಮ್ಮೆಲೆ ಭಯದಿಂದ ಕಾರ್ ಕಿಟಕಿ ಹಾಕಿಕೊಂಡರು.
ಕಾರ್‍ನಲ್ಲಿದ್ದವರು ಆತಂಕದಿಂದ ಏದುಸಿರುಬಿಡೋದನ್ನ ವಿಡಿಯೋದಲ್ಲಿ ಕೇಳಬಹುದು. ಸಿಂಹವನ್ನ ಓವರ್‍ಟೇಕ್ ಮಾಡೋದು ಅದಕ್ಕೆ ಇಷ್ಟವಿರಲಿಲ್ಲ. ಅದಕ್ಕಾಗಿಯೇ ಅದು ನಮಗೆ ಖಡಕ್ ಎಚ್ಚರಿಕೆ ಕೊಡ್ತು ಅಂತ ಈ ವಿಡಿಯೋ ಚಿತ್ರೀಕರಣ ಮಾಡಿದವರು ತಮಗಾದ ಅನುಭವವನ್ನ ಹಂಚಿಕೊಂಡಿದ್ದಾರೆ.